Central Government Staff Recruitment Commission SSC 3003 post requirementಎಸ್‌ಎಸ್‌ಸಿ ನೇಮಕಾತಿ

ಕೇಂದ್ರ ಸರ್ಕಾರದ ಸಿಬ್ಬಂದಿ ನೇಮಕಾತಿ ಆಯೋಗವು (ಎಸ್‌ಎಸ್‌ಸಿ) 3003 ಸೆಲೆಕ್ಷನ್ ಪೋಸ್ಟ್‌ಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದ್ದು, ಆನ್‌ಲೈನ್ ಅರ್ಜಿ ಸಲ್ಲಿಕೆ ಮೇ 4ರಂದು ಕೇಂದ್ರದ ಇಲಾಖೆ ಅಥವಾ ಕೊನೆಗೊಳ್ಳಲಿದೆ.

ಸಚಿವಾಲಯಗಳಲ್ಲಿ ಖಾಲಿ ಇರುವ ಗ್ರೂಪ್ ಸಿ ವೃಂದದ ನಾನ್ ಟೆಕ್ನಿಕಲ್ ಮತ್ತು ಗ್ರೂಪ್ ಬಿ ವೃಂದದ ನಾನ್ ಗೆಜೆಟೆಡ್ ಹುದ್ದೆಗಳಿಗೆ ಎಸ್‌.ಎಸ್ಸಿ ಪ್ರತಿ ವರ್ಷ ‘ಎಸ್‌ಎಸ್‌ಸಿ ಸೆಲೆಕ್ಷನ್, ಪೋಸ್ಟ್’ ಎಂಬ ಹೆಸರಿನಲ್ಲಿ ಅಧಿಸೂಚನೆ ಪ್ರಕಟಿಸುತ್ತದೆ.

ಎಸ್ಎಸ್ಎಲ್ಸಿ, ಪಿಯುಸಿ, ಪದವಿ ತನಕದ ಅಭ್ಯರ್ಥಿಗಳು ಇವುಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ನೇಮಕಾತಿಗೆ ಕರ್ನಾಟಕ ಸೇರಿದಂತೆ ದೇಶದಾದ್ಯಂತ ಜೂನ್ ತಿಂಗಳಿನಲ್ಲಿ ಕಂಪ್ಯೂಟರ್ ಆಧರಿತ ಪರೀಕ್ಷೆ ನಡೆಯಲಿದೆ ಎಂದು ಎಸ್ಎಸ್ಸಿ ತಿಳಿಸಿದೆ.

ಹುದ್ದೆ/ಅರ್ಹತೆ ವಿವರ: ಕ್ಯಾಂಟೀನ್ ಅಟೆಂಡೆಂಟ್, ಫುಮಿಗೇಶನ್ ಅಸಿಸ್ಟೆಂಟ್, ಜೂನಿಯರ್ ಎಂಜಿನಿಯರ್, ಟೆಕ್ನಿಕಲ್ ಸೂಪರಿಂಟೆಂಡೆಂಟ್, ಸೀನಿಯರ್ ಸೈಂಟಿಫಿಕ್ ಅಸಿಸ್ಟೆಂಟ್, ಫೈರ್‌ಮನ್, ಟೆಕ್ನಿಕಲ್ ಆಫೀಸರ್, ಆಪರೇಟರ್, ಕ್ಲರ್ಕ್, ಚಾರ್ಚ್‌ಮನ್, ಜೂನಿಯರ್ ಕಂಪ್ಯೂಟರ್, ರೇಡಿಯೋಗ್ರಾಫರ್, ಲೈಬ್ರರಿ ಕ್ಲರ್ಕ್, ಲ್ಯಾಬ್ ಅಸಿಸ್ಟೆಂಟ್, ರಿಸರ್ಚ್ ಅಸೋಸಿಯೇಟ್, ಫೋಟೋ ಆರ್ಟಿಸ್ಟ್, ಬಟಾನಿಕಲ್ ಅಸಿಸ್ಟೆಂಟ್, ಟೂರಿಸ್ಟ್ ಇನ್ ಫಾರ್ಮೆಶನ್ ಆಫೀಸರ್ ಸೇರಿದಂತೆ 100ಕ್ಕೂ ಹೆಚ್ಚು ವಿವಿಧ ಬಗೆಯ ಹುದ್ದೆಗಳಿಗೆ ನೇಮಕ ನಡೆಯಲಿದೆ.

ಆಯಾ ಹುದ್ದೆಗೆ ಅನುಸಾರ ಎಸ್ಸೆಸ್ಸೆಲ್ಸಿ, ಪಿಯುಸಿ, ಡಿಪ್ಲೊಮಾ, ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಕೆಲವೊಂದು ಹುದ್ದೆಗಳಿಗೆ ನಿರ್ದಿಷ್ಟ ಸೇವಾನುಭವ ಕಡ್ಡಾಯಗೊಳಿಸಲಾಗಿದೆ. ಈ ಕುರಿತಾದ ವಿಸ್ಸತ ವಿವರಗಳನ್ನು ಅಧಿಸೂಚನೆಯಲ್ಲಿ ಪಡೆಯಬಹುದಾಗಿದೆ.’

ಒಟ್ಟಾರೆ 18ರಿಂದ 35 ವರ್ಷದವರೆಗಿನ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶವಿದೆ. ಎಲ್ಲಾ ಹುದ್ದೆಗಳಂತೆ ಈ ಹುದ್ದೆಗಳ ಲ್ಲಿಯೂ ಮೀಸಲಾತಿ ವ್ಯಾಪ್ತಿಗೆ ಒಳಪಡುವ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ. ಅರ್ಜಿ ಸಲ್ಲಿಸುವ ಎಸ್‌ಸಿ/ಎಸ್‌ಟಿ/ ಮಾಜಿ ಸೈನಿಕರು ಹೊರತುಪಡಿಸಿ ಉಳಿದವರೆಲ್ಲರೂ 100 ರೂ. ಶುಲ್ಕ ಪಾವತಿಸಬೇಕು. ಹೆಚ್ಚಿನ

ವಿವರಗಳಿಗೆ ಎಸ್.ಎಸ್‌ ವೆಬ್‌ಸೈಟ್ ಗೆ (https://ssc.gov.in) ಭೇಟಿ ನೀಡಬಹುದು.

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *