SSC Stenographer Recruitment 2026 Apply Online for 731 Group C and D Postsಎಸ್‌ಎಸ್‌ಸಿ ನೇಮಕಾತಿ

ಉದ್ಯೋಗ ಆಕಾಂಕ್ಷಿಗಳಿಗೆ ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ಸಿಹಿ ಸುದ್ದಿ ನೀಡಿದೆ. 731 ಸ್ಟೆನೋಗ್ರಾಫರ್ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು 2026ರ ಮೇ 15ರೊಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಸ್ಟೆನೋಗ್ರಾಫರ್ ಗ್ರೇಡ್ C & D ಪರೀಕ್ಷೆ 2026

ಸಂಸ್ಥೆಯ ಹೆಸರು: ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC)
ಒಟ್ಟು ಹುದ್ದೆಗಳು: 731
ಉದ್ಯೋಗ ಸ್ಥಳ: ಭಾರತದೆಲ್ಲೆಡೆ
ಹುದ್ದೆಯ ಹೆಸರು: ಸ್ಟೆನೋಗ್ರಾಫರ್ ಗ್ರೂಪ್ C, D
ವೇತನ: SSC ನಿಯಮಾನುಸಾರ

ಅರ್ಹತಾ ವಿವರಗಳು

ಶೈಕ್ಷಣಿಕ ಅರ್ಹತೆ:

SSC ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಮಾನ್ಯತೆ ಪಡೆದ ಯಾವುದೇ ಮಂಡಳಿ/ಪರಿಷತ್ತಿನಿಂದ 12ನೇ ತರಗತಿ ಉತ್ತೀರ್ಣ ಆಗಿರಬೇಕು.

ವಯೋಮಿತಿ:

SSC ನೇಮಕಾತಿ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯ ಕನಿಷ್ಠ ವಯಸ್ಸು 18 ವರ್ಷ ಹಾಗೂ ಗರಿಷ್ಠ ವಯಸ್ಸು 30 ವರ್ಷ ಇರಬೇಕು. 01 ಆಗಸ್ಟ್ 2026ರಂತೆ ವಯಸ್ಸು ಪರಿಗಣಿಸಲಾಗುತ್ತದೆ.

ವಯೋಮಿತಿ ಸಡಿಲಿಕೆ:

  • OBC ಅಭ್ಯರ್ಥಿಗಳು: 3 ವರ್ಷ
  • SC/ST ಅಭ್ಯರ್ಥಿಗಳು: 5 ವರ್ಷ
  • PwBD (UR/EWS): 10 ವರ್ಷ
  • PwBD (OBC): 13 ವರ್ಷ
  • PwBD (SC/ST): 15 ವರ್ಷ

ಅರ್ಜಿ ಶುಲ್ಕ:

  • Gen / OBC ಅಭ್ಯರ್ಥಿಗಳು: ರೂ.100/-
  • SC / ST / ಮಹಿಳಾ ಅಭ್ಯರ್ಥಿಗಳು: ಶುಲ್ಕ ಇಲ್ಲ

ಪಾವತಿ ವಿಧಾನ: ಆನ್‌ಲೈನ್

ಆಯ್ಕೆ ಪ್ರಕ್ರಿಯೆ:

  • ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)
  • ಕೌಶಲ್ಯ ಪರೀಕ್ಷೆ (ಹುದ್ದೆಯ ಅವಶ್ಯಕತೆ ಪ್ರಕಾರ)
  • ದಾಖಲೆ ಪರಿಶೀಲನೆ
  • ವೈದ್ಯಕೀಯ ಪರೀಕ್ಷೆ

SSC ಸ್ಟೆನೋಗ್ರಾಫರ್ ಪರೀಕ್ಷಾ ಮಾದರಿ 2026

ನಕಾರಾತ್ಮಕ ಅಂಕ (Negative Marking): 0.50 ಅಂಕ
ಪರೀಕ್ಷಾ ವಿಧಾನ: ಆನ್‌ಲೈನ್ CBT

ವಿಷಯಪ್ರಶ್ನೆಗಳುಅಂಕಗಳು
ಸಾಮಾನ್ಯ ಜ್ಞಾನ5050
ಸಾಮಾನ್ಯ ಬುದ್ಧಿಮತ್ತೆ ಮತ್ತು ತಾರ್ಕಿಕತೆ5050
ಇಂಗ್ಲಿಷ್ ಭಾಷೆ ಮತ್ತು ಅರ್ಥಗ್ರಹಣ100100
ಒಟ್ಟು200200

ಅರ್ಜಿ ಸಲ್ಲಿಸುವ ವಿಧಾನ:

  1. ಮೊದಲು SSC ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ಅರ್ಹತಾ ಮಾನದಂಡಗಳನ್ನು ಪರಿಶೀಲಿಸಬೇಕು.
  2. ಆನ್‌ಲೈನ್ ಅರ್ಜಿ ಪ್ರಾರಂಭಿಸುವ ಮೊದಲು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಸಿದ್ಧವಾಗಿಟ್ಟುಕೊಳ್ಳಬೇಕು.
  3. ಗುರುತಿನ ಚೀಟಿ, ವಯಸ್ಸಿನ ದಾಖಲೆ, ವಿದ್ಯಾರ್ಹತಾ ಪ್ರಮಾಣಪತ್ರ, ಬಯೋಡೇಟಾ ಹಾಗೂ ಅನುಭವ ಪ್ರಮಾಣಪತ್ರಗಳನ್ನು ಸಿದ್ಧವಾಗಿಡಿ.
  4. ಕೆಳಗಿನ ಲಿಂಕ್ ಮೂಲಕ SSC Stenographer Group C, D Apply Online ಮೇಲೆ ಕ್ಲಿಕ್ ಮಾಡಿ.
  5. ಅರ್ಜಿಯಲ್ಲಿ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ.
  6. ಅಗತ್ಯ ದಾಖಲೆಗಳ ಸ್ಕ್ಯಾನ್ ಪ್ರತಿಗಳು ಮತ್ತು ಇತ್ತೀಚಿನ ಫೋಟೋ ಅಪ್‌ಲೋಡ್ ಮಾಡಿ.
  7. ಅರ್ಜಿ ಶುಲ್ಕವನ್ನು ವರ್ಗಾನುಸಾರ ಪಾವತಿಸಿ.
  8. ಕೊನೆಯಲ್ಲಿ Submit ಬಟನ್ ಒತ್ತಿ ಅರ್ಜಿ ಪ್ರಕ್ರಿಯೆ ಪೂರ್ಣಗೊಳಿಸಿ.
  9. ಮುಂದಿನ ಬಳಕೆಗೆ ಅರ್ಜಿ ಸಂಖ್ಯೆ / ರೆಫರೆನ್ಸ್ ಸಂಖ್ಯೆಯನ್ನು ಸೇವ್‌ ಮಾಡಿಟ್ಟುಕೊಳ್ಳಿ

ಪ್ರಮುಖ ದಿನಾಂಕಗಳು:

  • ಅರ್ಜಿ ಪ್ರಾರಂಭ ದಿನಾಂಕ: 24-04-2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15-05-2026
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 15-05-2026
  • ಅರ್ಜಿ ತಿದ್ದುಪಡಿ ವಿಂಡೋ: 20-05-2026 ರಿಂದ 21-05-2026
  • CBT ಪರೀಕ್ಷೆ ದಿನಾಂಕ: ಜುಲೈ – ಆಗಸ್ಟ್ 2026

ಪ್ರಮುಖ ಲಿಂಕ್‌ಗಳು:

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *