ಸೆಂಟ್ರಲ್ ವೇರ್‌ಹೌಸಿಂಗ್ ಕಾರ್ಪೊರೇಷನ್ ಕನ್ಸನ್ವೆಂಟ್ (Central Warehousing Corporation Consonant) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಕೇಂದ್ರ ಸರ್ಕಾರ (Central Government) ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 12 ಅಥವಾ ಅದಕ್ಕೂ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಎರಡು ಕನ್ಸಲೆಂಟ್ ಹುದ್ದೆಗಳು ಖಾಲಿಯಿದ್ದು, ಹೊಸದಿಲ್ಲಿ ಉದ್ಯೋಗ ಸ್ಥಳವಾಗಿದೆ. 47,600 ರೂ.ನಿಂದ 1,51,100 ರೂ. ವರೆಗೆ ಮಾಸಿಕ ವೇತನ ಇರಲಿದೆ. ಸಂದರ್ಶನದ ಮೂಲಕ ಆಯ್ಕೆ ನಡೆಯಲಿದ್ದು, ಅರ್ಜಿ ಶುಲ್ಕವಿರುವುದಿಲ್ಲ. ಅರ್ಜಿ ಸಲ್ಲಿಸಲು ಲಿಂಕ್: https://www.cwceportal.com/ ಕೆಎಚ್‌ಪಿಟಿನಿಂದ ಅರ್ಜಿ ಆಹ್ವಾನ ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್ (ಕೆಹೆಚ್‌ಪಿಟಿ) ತನ್ನ ಆರೋಗ್ಯ ಕಾರ್ಯಕ್ರಮದ ಉಪಕ್ರಮಗಳ ಅಡಿಯಲ್ಲಿ ಸಮುದಾಯ ಸಂಯೋಜಕರು ಮತ್ತು ಕ್ಷೇತ್ರ ತನಿಖಾಧಿಕಾರಿಗಳು ಸೇರಿದಂತೆ 7 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಪದವಿ ಅಥವಾ ಸ್ನಾತಕೋತ್ತರ ಪದವಿ ಮತ್ತು ಕನಿಷ್ಠ 2 ವರ್ಷಗಳ ಕ್ಷೇತ್ರ ಸಮೀಕ್ಷೆ ಅಥವಾ ಆರೋಗ್ಯ ಕಾರ್ಯಕ್ರಮದ ಅನುಭವ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಏಪ್ರಿಲ್ 4 ಅಂತಿಮ ದಿನವಾಗಿದೆ. ಅರ್ಜಿ ಸಲ್ಲಿಸಲು ಲಿಂಕ್: https://www.khpt.org/work-with-us ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಕ್ರೀಡಾ ಸಾಧಕರಿಗೆ ಅವಕಾಶ: ಕೇಂದ್ರ ಕ್ರೀಡಾ ಪ್ರಾಧಿಕಾರದದಿಂದ 323 ಹುದ್ದೆ ಭರ್ತಿ NIA 29 ಹುದ್ದೆಗಳಿಗೆ ಅರ್ಜಿ ಆಹ್ವಾನ: 12ನೇ ತರಗತಿ ಮತ್ತು ಪದವೀಧರರಿಗೆ ಅವಕಾಶ