ನಮ್ಮ ಪೂರ್ವಜರಾದ ಅದೆಷ್ಟೋ ಮಹರ್ಷಿಗಳ ಹೆಸರುಗಳನ್ನು ನಾವು ಕೇಳಿಯೇ ಇಲ್ಲ. ಅವರುಗಳಲ್ಲಿ ಋಷಭ ಮಹರ್ಷಿಗಳು ಒಬ್ಬರು. ಸಕಲ ಜೀವರಾಶಿಗಳ ಒಳತಿಗಾಗಿ ಇವರು ಮಾಡಿದ ಕಾರ್ಯ ಅಪಾರವಾಗಿದೆ. ಪೂರ್ವದಲ್ಲಿ ನಾಭಿಯೆಂಬ ಪ್ರಸಿದ್ದ ರಾಜನಿದ್ದನು. ಅವನು ಅಗ್ನಿಷ್ಟೋಮವೆಂಬ ರಾಜನಿಗೆ ದರ್ಶನವಿತ್ತನು. ರಾಜನ ಅಪೇಕ್ಷೆಯಂತೆ ತನಗೆ ಸಮಾನನಾದ ಪುತ್ರನನ್ನು ಯಾಗವನ್ನು ನಡೆಸಿದನು. ಯಾಗಾಂತ್ಯದಲ್ಲಿ ಶ್ರೀಮನ್ನಾರಾಯಣನೇ ಪ್ರತ್ಯಕ್ಷನಾಗಿ ಅವನಿಗೆ ಅನುಗ್ರಹಿಸಿದನು; ಅದರಂತೆಯೇ ಮಹಾರಾಣಿಯಾದ ಮೇರುದೇವಿಯಲ್ಲಿ ತನ್ನಂಶದಿಂದ ಅವತರಿಸಿದನು. ಇದೇ ಋಷಭಾವತಾರವು. ಮಗುವು ಬೆಳೆಯುತ್ತ ಸಮಬುದ್ದಿ, ಇಂದ್ರಿಯನಿಗ್ರಹ, ವಿರಕ್ತಿ, ಪ್ರಭುಶಕ್ತಿ, ಮಹಾವಿಭೂತಿಗಳಂತಹ ವಿಶಿಷ್ಟ ಗುಣಗಳನ್ನು ವೃದ್ಧಿಪಡಿಸಿಕೊಂಡಿತು. ಹೀಗೆ ಸತ್ಯ ಗುಣಪ್ರಧಾನನಾದ, ಇಂದ್ರಿಯ ಬಲದಿಂದ ಎಲ್ಲರನ್ನೂ ಮೀರಿಸಿದ ಅವನಿಗೆ ಋಷಭನೆಂಬ ಹೆಸರು ಅನ್ವರ್ಥವಾಗಿದ್ದಿತು. ಋಷಭವೆಂದರೆ ಶ್ರೇಷ್ಠವಾದ ಗೂಳಿಯೆಂದೂ, ಈ ಪದವು ಸಮಾಸಾಂತ್ಯದಲ್ಲಿ ಪರಮಶ್ರೇಷ್ಠನೆಂದೂ ಅರ್ಥವಾಗುತ್ತದೆ. ಯೋಗಿವರ್ಯನಾದ ಋಷಭನ ನಾಡಿನಲ್ಲಿ ಒಮ್ಮೆ ಇಂದ್ರನು ಬಹಳ ಕಾಲದವರೆಗೆ ಮಳೆಯನ್ನೇ ಸುರಿಸಲಿಲ್ಲ. ಋಷಭನು ತಾನೇ ಇಂದ್ರನಾಗಿ, ತನ್ನ ಸ್ವಶಕ್ತಿಯಿಂದಲೇ ಸುವೃಷ್ಟಿಯನ್ನುಂಟುಮಾಡಿದನು. ತಾನು ಸರ್ವಜ್ಞನಾಗಿದ್ದರೂ ಕೆಲವು ಕಾಲದವರೆಗೆ ಗುರುಕುಲವಾಸವನ್ನೂ ಗೃಹಸ್ಥಾಶ್ರಮವನ್ನೂ ಶ್ರದ್ಧೆಯಿಂದ ನಡೆಸಿ ತನ್ನ ದೇಶದ ಪ್ರಜೆಗಳಿಗೆ ಸನ್ಮಾರ್ಗವನ್ನು ತೋರಿಸಿಕೊಟ್ಟನು. ದೇವೇಂದ್ರನ ಪುತ್ರಿಯಾದ ಜಯಂತಿಯು ಇವನ ಮಡದಿಯಾಗಿದ್ದಳು. ಋಷಭನ ಪುತ್ರನಾದ ಭರತನಿಂದಲೇ ಈ ಭೂಭಾಗಕ್ಕೆ ಭರತವರ್ಷವೆಂದು ಹೆಸರು ಬಂದಿತೆಂದು ಹೇಳುತ್ತಾರೆ. ಉಳಿದ ಮಕ್ಕಳೂ ಮಹಾಭಾಗವತರಾಗಿದ್ದು ಲೋಕದಲ್ಲಿ ಭಗವದ್ಧರ್ಮವನ್ನು ಪ್ರಕಾಶಪಡಿಸಿದರು. ಋಷಭನು ಕರ್ಮಗಳಿಗೆ ವಶನಾಗದೆ ಕೇವಲ ಆನಂದಮಯನಾಗಿ ರಾಗದ್ವೇಷಾದಿ ಗಳನ್ನು ಬಿಟ್ಟು, ಪುರುಷಾರ್ಥಗಳನ್ನು ಸಾಧಿಸುವ ಮಾರ್ಗವನ್ನು ಎಲ್ಲರಿಗೂ ಮೋಧಿಸುತ್ತಿದ್ದನು. ಭೂಸಂಚಾರ ಮಾಡುತ್ತ, ಪ್ರಭುವಿನಲ್ಲಿ ಪೂರ್ಣಭಕ್ತಿಯನ್ನು ಪ್ರಚಾರ ಮಾಡುತ್ತಿದ್ದನು. ತನ್ನ ಮಕ್ಕಳಿಗೂ ಮೋಕ್ಷಧರ್ಮವನ್ನು ಬೋಧಿಸಿ ಅವರೆಲ್ಲರನ್ನೂ ನನ್ಮಾರ್ಗ ಪ್ರವರ್ತಕರನ್ನಾಗಿ ಮಾಡಿದನು. ಅನಂತರ ಅವಧೂತಮಾರ್ಗವನ್ನು ಹಾಡಿದು, ಯೋಗವ್ರತಗಳನ್ನು ಆಚರಿಸುತ್ತ ಭೂಮಂಡಲವನ್ನು ಸುತ್ತಿದನು. ಕೊನೆಗೆ-ಮಾಲಯದ ಹೇಮಕೂಟವೆಂಬ ಪರ್ವತದಲ್ಲಿ ಋಷಭನು ಸಹಸ್ರಾರು ವರ್ಷ ತಪಸ್ಸನ್ನು ಮಾಡುತ್ತಿದ್ದನು. ಆದ್ದರಿಂದ ಈ ಪರ್ವತಕ್ಕೆ ಋಷಭ ಪರ್ವತವೆಂದೇ ಹೆಸರಾಯಿತು. ಅಲ್ಲಿ ಋಷಭನೊಡನೆ ಸಂಭಾಷಿಸಲು ಅನೇಕ ಮಹರ್ಷಿಗಳು ಬರುತ್ತಿದ್ದರು. ಒಂದು ಸಲ ಋಷಭರು ತಪಸ್ವಿಗಳೊಡನೆ ಮಾತನಾಡುತ್ತಿದ್ದಾಗ, ಕೆಲವು ಪರ್ವತಾರೋಹಿ ಯಾತ್ರಿಕರು ಬಂದರು. ಅವರು ತಮ್ಮತಮ್ಮಲ್ಲಿಯೇ ಹರಟುತ್ತ, ಗಲಾಟೆ ಮಾಡುತ್ತ ಬರುತ್ತಿದ್ದರು. ಈ ಗಲಾಟೆಯಿಂದಾಗಿ ಋಷಭರಿಗೆ ತಪಸ್ವಿಗಳೊಡನೆ ಮಾತನಾಡಲು ಪ್ರತಿಬಂಧಕವುಂಟಾಯಿತು. ಒಡನೆಯೇ ಪರ್ವತರಾಜನನ್ನು ಕರೆದು, “ಈ ಪರ್ವತದ ಮೇಲೆ ನಿಂತು ಯಾರಾದರೂ ಮಾತನಾಡಿದರೆ ಅವರ ಮೇಲೆ ಕಲ್ಲಿನ ಮಳೆಗರೆದು ಅವರು ಮಾತನಾಡುವುದನ್ನು ನಿಲ್ಲಿಸು” ಎಂದು ಆದೇಶಿಸಿದರು. ವಾಯುದೇವನಿಗೂ ಅಲ್ಲಿ ಶಬ್ದ ಮಾಡದಂತೆ ಆದೇಶಿಸಿದರು. ಈಗಲೂ ತಪಶ್ಚರಣೆ ಮಾಡದವರು, ನಿಯಮ ವ್ರತಾನುಷ್ಠಾನವಿಲ್ಲದವರಿಗೆ ಈ ಪರ್ವತವನ್ನು ಹತ್ತಲು ಸಾಧ್ಯವಿಲ್ಲವೆಂದು ಹೇಳುತ್ತಾರೆ. ಅಲ್ಲಿ ಇದ್ದಕ್ಕಿದ್ದಂತೆಯೇ ಮೋಡಗಳು ಆವರಿಸುವುದು; ಆಲಿಕಲ್ಲಿನ ಮಳೆ ಸುರಿಯುವುದು. ಆದ್ದರಿಂದ ಯಾತ್ರಿಕರು ಅಲ್ಲಿಗೆ ಹೋಗಲು ಮನಸ್ಸು ಮಾಡುವುದಿಲ್ಲ. ಆಕಾರ ಗ್ರಂಥ: ಪ್ರಾಚೀನ ಭಾರತದ ಮಹರ್ಷಿಗಳು ಭಾಗ-೧ ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಭಗೀರಥ ಜಯಂತಿ: ಪೂರ್ವಜರ ಶಾಪ ಮತ್ತು ಭಗೀರಥನ ಅಂತರಂಗದ ತಳಮಳ ದೇಹದ ಎಂಟು ಭಾಗ ವಕ್ರತೆಯಿಂದ ಕೂಡಿದ ಅಷ್ಟಾವಕ್ರ ಮಹರ್ಷಿ