ವೀರ ಸಾವರ್ಕರ್‌

ಮುದ್ರಣಗೊಂಡು ಭಾರತಕ್ಕೆ ಬಂದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ದೇಶದಲ್ಲಿನ ಯುವಕರಲ್ಲಿ ಸ್ವಾತಂತ್ರ್ಯದ ಕಿಚ್ಚು ಹೆಚ್ಚಿತು. ನೂರಾರು ಸಂಖ್ಯೆಯಲ್ಲಿ ಯುವಕರು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ್ದು, ಬ್ರಿಟಿಷರ ಎದೆಯಲ್ಲಿ ನಡುಕ ಹುಟ್ಟಿಸಿತು. ಇದಕ್ಕೆಲ್ಲ ಕಾರಣ ಸ್ವಾತಂತ್ರ್ಯ ವೀರ ಸಾವರ್ಕರ್‌ ಎಂದು ಅರಿತ ಬ್ರಿಟಿಷರು ಸಾವರ್ಕರ್‌ ಅವರನ್ನು ಹೇಗಾದರು ಮಾಡಿ ಬಂಧಿಸಬೇಕೆಂದು ಹೊಂಚು ಹಾಕಿದರು.

ಇದೇ ಸಮಯಕ್ಕೆ ಮಹಾರಾಷ್ಟ್ರದ ನಾಸಿಕ್‌ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ “ಜಾಕ್ಸನ್‌”ನ ಹತ್ಯೆಯಾಗಿತ್ತು. ಈ ಸಮಯವನ್ನು ಬಳಸಿಕೊಂಡ ಬ್ರಿಟಿಷರು ಈ ಹತ್ಯೆಯಲ್ಲಿ ಸಾವರ್ಕರ್‌ ಅವರನ್ನು ಆರೋಪಿಯನ್ನಾಗಿಸಿ ಲಂಡನ್‌ನಲ್ಲಿ ಬಂಧಿಸಿತು. ಲಂಡನ್‌ನ ಜೈಲಿನಲ್ಲಿ ಸಾವರ್ಕರ್‌ರನ್ನು ಬಂಧಿಸಿಟ್ಟರೇ ಅಲ್ಲಿಂದ ಹೊರಬರುವುದು ಸುಲಭವೆಂದು ತಿಳಿದು ಭಾರತದ ಜೈಲಿನಲ್ಲಿ ಇರಿಸುವ ಯೋಚನೆಯನ್ನು ಬ್ರಿಟಿಷರು ಮಾಡಿದರು.

ಅದರಂತೆ, ಸಾವರ್ಕರ್‌ ಅವರನ್ನು ಹೊತ್ತ ಎಸ್.ಎಸ್. ಮೊರಿಯಾ ಹಡುಗು ಕರೆದುಕೊಂಡು ಭಾರತದತ್ತ ಹೊರಟಿತು. ಹೇಗಾದರು ಮಾಡಿ ಬ್ರಿಟಿಷರ ಕೈಯಿಂದ ತಪ್ಪಿಸಿಕೊಳ್ಳಬೇಕೆಂಬ ಯೋಚನೆಯಲ್ಲಿದ್ದ ಸಾವರ್ಕರ್‌ ಅವರು  ಹಡುಗಿನಲ್ಲಿ ಒಂದು ಉಪಾಯ ಮಾಡಿದರು. 1910ರ ಜುಲೈ 8ರಂದು ಫ್ರಾನ್ಸ್‌ನ ಮಾರ್ಸೆಲ್ಲೆ ಬಂದರು ಸಮೀಪ ಹಡಗು ಬಂದಾಗ, ಸಾವರ್ಕರ್‌ ಅವರು ಕಾವಲು ಇದ್ದ ಪೊಲೀಸ್‌ನನ್ನು ಎಬ್ಬಿಸಿ ಶೌಚಾಲಯಕ್ಕೆ ಹೋಗಬೇಕಾಗಿದೆ ಎಂದು ಹೇಳಿದರು.

ಪೊಲೀಸ್‌ ಸಾವರ್ಕರ್‌ ಅವರನ್ನು ಕರೆದುಕೊಂಡು ಶೌಚಾಲಯಕ್ಕೆ ಹೋದರು. ಶೌಚಾಲಯದ ಒಳಗಡೆ ಹೋದ ಸಾವರ್ಕರ್‌ ಅವರು ತಕ್ಷಣವೇ ತಮ್ಮ ಅಂಗಿ ತೆಗೆದು ಬಾಗಿಲಿನ ಕಿಟಕಿ ಮುಚ್ಚುವಂತೆ ನೇತು ಹಾಕಿದರು. ನಂತರ, ಶೌಚಾಲಯದ ಗೋಡೆಯಲ್ಲಿದ್ದ ಗಾಜಿನ ಕಿಟಕಿ ಒಡೆದರು. ಬಳಿಕ ಒಂದೆರಡು ಬಾರಿ ಜೋರಾಗಿ ಉಸಿರು ಬಿಟ್ಟು, ದೇಹವನ್ನು ಕುಗ್ಗಿಸಿದರು.

ಬಳಿಕ ಸ್ವಾತಂತ್ರ್ಯ ಲಕ್ಷ್ಮೀ ಕಿ ಜೈ ಎಂದು ಘೋಷಣೆ ಕೂಗಿ ಸಣ್ಣದಾದ ಕಿಟಕಿಯ ಮೂಲಕ ಸಮುದ್ರಕ್ಕೆ ಹಾರಿದರು. ಹೀಗೆ ಕಿಟಕಿಯಿಂದ ಹಾರುವಾಗ, ಗಾಜಿನ ಚೂರುಗಳು ಸಾವರ್ಕರ್‌ ಅವರ ದೇಹಕ್ಕೆ ಚುಚ್ಚಿದವು. ಚೂಪಾದ ದಪ್ಪನೆಯ ಗಾಜು ಸಾವರ್ಕರ್‌ ಅವರ ದೇಹವನ್ನು ಹರಿಯಿತು. ಎಷ್ಟರ ಮಟ್ಟಿಗೆ ಅಂದ್ರೆ, ಮಾಂಸ ಹೊರಬಂದಿತ್ತು. ನೀರಿನಂತೆ ರಕ್ತ ಹರಿಯಲಾರಂಭಿಸಿತು.

ಇಂತಹ ನೋವಿನಲ್ಲೂ ಸಾವರ್ಕರ್‌ ಅವರು ಸಮುದ್ರಕ್ಕೆ ಹಾರಿದರು. ಎಷ್ಟು ಹೊತ್ತಾದರು ಸಾವರ್ಕರ್‌ ಹೊರಗಡೆ ಬಾರದಿದ್ದಾಗ ಅನುಮಾನಗೊಂಡ ಪೊಲೀಸ್‌ ಶೌಚಾಲಯದ ಬಾಗಿಲು ತೆಗೆದು ನೋಡಿದಾಗ, ಒಳಗಡೆ ಇರಲಿಲ್ಲ. ಅದಗಾಲೇ ಸಾವರ್ಕರ್‌ ಸಮುದ್ರದಲ್ಲಿ ಈಜಲು ಆರಂಭಿಸಿದರು.

ಈ ವಿಚಾರ ತಿಳಿದ ಇನ್ನಿತರ ಪೊಲೀಸರು ಸಾವರ್ಕರ್‌ ಅವರ ಮೇಲೆ ಗುಂಡಿನ ಸುರಿಮಳೆ ಸುರಿಸಲಾರಂಭಿಸಿದರು. ಆದರೆ, ಸಾವರ್ಕರ್‌ ಅವರಿಗೆ ಯಾವ ಗುಂಡೂ ತಾಗಲಿಲ್ಲ. ಸಾವರ್ಕರ್‌ ಅವರು ಬರೊಬ್ಬರಿ 7 ಕಿಮೀ ಈಜಿ ಫ್ರಾನ್ಸ್‌ ದೇಶದ ದಡ ಸೇರಿದರು. ಸಣ್ಣ ಹಡುಗಿನ ಮೂಲಕ ಸಾವರ್ಕರ್‌ ಬೆನ್ನತ್ತಿ ಬಂದ ಬ್ರಿಟಿಷರು, ಫ್ರಾನ್ಸ್‌ ನೆಲದಲ್ಲಿ ಸಾವರ್ಕರ್‌ ಅವರನ್ನು ಬಂಧಿಸಿ ಭಾರತಕ್ಕೆ ಕರೆತಂದರು. ಭಾರತದಲ್ಲಿ ಜಾಕ್ಸನ್‌ ಪ್ರಕರಣದ ವಿಚಾರಣೆ ನಡೆದು, ನ್ಯಾಯಾಲಯ ಸಾವರ್ಕರ್‌ ಅವರಿಗೆ ಎರಡು ಜೀವಾವಧಿ ಶಿಕ್ಷೆ ವಿಧಿಸಿತು. ಬ್ರಿಟಿಷರು ಸಾವರ್ಕರ್‌ ಅವರನ್ನು ಅಂಡಮಾನ್‌ ಜೈಲಿಗೆ  ಕರೆದುಕೊಂಡು ಹೋದರು. ಅಲ್ಲಿ, ಎದುರಾದವನೇ ಕ್ರೂರಿ ಬ್ಯಾರಿ…. ಜೈಲಿನಲ್ಲಿ ಸಾವರ್ಕರ್‌ ಅವರು ಅನುಭವಿಸಿದ ಕಷ್ಟ, ಜೈಲಿನಲ್ಲಿ ತಂದ ಬದಲಾವಣೆ ಎಲ್ಲವೂ ಮುಂದಿನ ಭಾಗದಲ್ಲಿ.

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *