ಬಳ್ಳಾರಿ ಜಿಲ್ಲಾ ಸಹಕಾರ ಬ್ಯಾಂಕ್ ನಿಯಮಿತ (Bellary DCCB) ನೇಮಕಾತಿ 2026: ಬಳ್ಳಾರಿ ಜಿಲ್ಲಾ ಸಹಕಾರ ಬ್ಯಾಂಕ್ ನಿಯಮಿತವು (Bellary District Co-Operative Bank Limited) ವಿವಿಧ ಹುದ್ದೆಗಳ ಭರ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಒಟ್ಟು 82 ಹುದ್ದೆಗಳ ಭರ್ತಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಕರ್ನಾಟಕ ಸರ್ಕಾರದ ಉದ್ಯೋಗವನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಅಭ್ಯರ್ಥಿಗಳು 30 ಜೂನ್ 2026 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಪ್ರಮುಖ ಸೂಚನೆ 06 ಏಪ್ರಿಲ್ 2026ರ ಬ್ಯಾಂಕ್ ಅಧಿಸೂಚನೆಯಂತೆ ಈ ಹುದ್ದೆಗಳಿಗೆ ಈಗಾಗಲೇ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕು. ಆದರೆ ಅವರು ಅರ್ಜಿ ಶುಲ್ಕವನ್ನು ಮರುಪಾವತಿಸುವ ಅಗತ್ಯವಿಲ್ಲ. ಹುದ್ದೆಗಳ ವಿವರ ಸಂಸ್ಥೆಯ ಹೆಸರು: ಬಳ್ಳಾರಿ ಜಿಲ್ಲಾ ಸಹಕಾರ ಬ್ಯಾಂಕ್ ನಿಯಮಿತ (Bellary DCCB) ಒಟ್ಟು ಹುದ್ದೆಗಳು: 82 ಉದ್ಯೋಗ ಸ್ಥಳ: ಬಳ್ಳಾರಿ, ಕರ್ನಾಟಕ ಹುದ್ದೆಹುದ್ದೆಗಳ ಸಂಖ್ಯೆಪ್ರಥಮ ದರ್ಜೆ ಸಹಾಯಕರು (FDA)22ದ್ವಿತೀಯ ದರ್ಜೆ ಸಹಾಯಕರು (SDA)28ವಾಹನ ಚಾಲಕ1ಜೂನಿಯರ್ ಅಸಿಸ್ಟೆಂಟ್31 ಶೈಕ್ಷಣಿಕ ಅರ್ಹತೆ ಹುದ್ದೆಶೈಕ್ಷಣಿಕ ಅರ್ಹತೆಪ್ರಥಮ ದರ್ಜೆ ಸಹಾಯಕರು (FDA)ಪದವಿ (Degree)ದ್ವಿತೀಯ ದರ್ಜೆ ಸಹಾಯಕರು (SDA)ಪಿಯುಸಿ (PUC)ವಾಹನ ಚಾಲಕಎಸ್‌ಎಸ್‌ಎಲ್‌ಸಿ / 10ನೇ ತರಗತಿಜೂನಿಯರ್ ಅಸಿಸ್ಟೆಂಟ್ಅಧಿಸೂಚನೆಯ ಪ್ರಕಾರ ವೇತನ ವಿವರ ಹುದ್ದೆಮಾಸಿಕ ವೇತನವ್ಯವಸ್ಥಾಪಕರು / ಪ್ರಥಮ ದರ್ಜೆ ಸಹಾಯಕರು₹44,425 – ₹83,700ದ್ವಿತೀಯ ದರ್ಜೆ ಸಹಾಯಕರು₹34,100 – ₹67,600ವಾಹನ ಚಾಲಕ₹31,775 – ₹61,300ಜೂನಿಯರ್ ಅಸಿಸ್ಟೆಂಟ್₹29,600 – ₹52,800 ವಯೋಮಿತಿ ಬಳ್ಳಾರಿ ಜಿಲ್ಲಾ ಸಹಕಾರ ಬ್ಯಾಂಕ್ ನೇಮಕಾತಿ ಅಧಿಸೂಚನೆಯ ಪ್ರಕಾರ: ಕನಿಷ್ಠ ವಯಸ್ಸು: 18 ವರ್ಷ ಗರಿಷ್ಠ ವಯಸ್ಸು: 35 ವರ್ಷ ವಯೋಸಡಿಲಿಕೆ OBC (2A, 2B, 3A, 3B) ಅಭ್ಯರ್ಥಿಗಳು – 3 ವರ್ಷ SC/ST ಹಾಗೂ ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳು – 5 ವರ್ಷ ಮಹಿಳೆಯರು ಹಾಗೂ ಅಂಗವಿಕಲ ಅಭ್ಯರ್ಥಿಗಳು (PWD) – 10 ವರ್ಷ ಅರ್ಜಿ ಶುಲ್ಕ ವರ್ಗಶುಲ್ಕಸಾಮಾನ್ಯ ಹಾಗೂ OBC (2A, 2B, 3A, 3B)₹1,000SC/ST, ಮಾಜಿ ಸೈನಿಕರು, PWD₹500 ಪಾವತಿ ವಿಧಾನ: ಡಿಮ್ಯಾಂಡ್ ಡ್ರಾಫ್ಟ್ / ಪೋಸ್ಟಲ್ ಆರ್ಡರ್ / ಮನಿ ಆರ್ಡರ್ ಆಯ್ಕೆ ಪ್ರಕ್ರಿಯೆ ಅಭ್ಯರ್ಥಿಗಳ ಆಯ್ಕೆ ಕೆಳಕಂಡ ಹಂತಗಳ ಮೂಲಕ ನಡೆಯಲಿದೆ: ಲಿಖಿತ ಪರೀಕ್ಷೆ ಸಂದರ್ಶನ ಪರೀಕ್ಷಾ ಮಾದರಿ FDA ಮತ್ತು SDA ಹುದ್ದೆಗಳಿಗಾಗಿ (ಒಟ್ಟು 200 ಅಂಕಗಳು) ವಿಷಯಅಂಕಗಳುಸಾಮಾನ್ಯ ಕನ್ನಡ50ಸಾಮಾನ್ಯ ಇಂಗ್ಲಿಷ್25ಸಾಮಾನ್ಯ ಜ್ಞಾನ25ಸಹಕಾರ ವಿಷಯ50ಭಾರತೀಯ ಸಂವಿಧಾನ25ಬ್ಯಾಂಕಿಂಗ್, ಸಹಕಾರ ಚಟುವಟಿಕೆಗಳು ಹಾಗೂ ವಸ್ತುನಿಷ್ಠ ವಿಷಯಗಳು25 ಚಾಲಕ ಮತ್ತು ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳಿಗಾಗಿ (ಒಟ್ಟು 100 ಅಂಕಗಳು) ವಿಷಯಅಂಕಗಳುಸಾಮಾನ್ಯ ಕನ್ನಡ50ಸಾಮಾನ್ಯ ಇಂಗ್ಲಿಷ್50 ಅರ್ಜಿ ಸಲ್ಲಿಸುವ ವಿಧಾನ ಮೊದಲು ಬಳ್ಳಾರಿ ಡಿಸಿಸಿಬಿ ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಹತೆಯನ್ನು ಖಚಿತಪಡಿಸಿಕೊಳ್ಳಿ. ಅರ್ಜಿ ಸಲ್ಲಿಸುವ ಮೊದಲು ಮಾನ್ಯ ಇ-ಮೇಲ್ ವಿಳಾಸ ಹಾಗೂ ಮೊಬೈಲ್ ಸಂಖ್ಯೆಯನ್ನು ಸಿದ್ಧವಾಗಿಟ್ಟುಕೊಳ್ಳಿ. ಗುರುತಿನ ಚೀಟಿ, ವಯಸ್ಸಿನ ಪ್ರಮಾಣಪತ್ರ, ಶೈಕ್ಷಣಿಕ ದಾಖಲೆಗಳು, ಅನುಭವ ಪ್ರಮಾಣಪತ್ರ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ. ಆನ್‌ಲೈನ್ ಅರ್ಜಿ ಲಿಂಕ್‌ಗೆ ಭೇಟಿ ನೀಡಿ. ಅರ್ಜಿಯಲ್ಲಿ ಕೇಳಲಾದ ಎಲ್ಲಾ ಮಾಹಿತಿಯನ್ನು ಸರಿಯಾಗಿ ನಮೂದಿಸಿ. ಅಗತ್ಯವಿದ್ದಲ್ಲಿ ಇತ್ತೀಚಿನ ಭಾವಚಿತ್ರ ಹಾಗೂ ದಾಖಲೆಗಳ ಸ್ಕ್ಯಾನ್ ಪ್ರತಿಗಳನ್ನು ಅಪ್‌ಲೋಡ್ ಮಾಡಿ. ಅನ್ವಯವಾಗುವ ವರ್ಗದ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿಸಿ. ಅರ್ಜಿ ಸಲ್ಲಿಸಿದ ನಂತರ ಅರ್ಜಿ ಸಂಖ್ಯೆ ಅಥವಾ ರೆಫರೆನ್ಸ್ ಸಂಖ್ಯೆಯನ್ನು ಸುರಕ್ಷಿತವಾಗಿ ಉಳಿಸಿಕೊಳ್ಳಿ. ಪ್ರಮುಖ ದಿನಾಂಕಗಳು ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 01 ಜೂನ್ 2026 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30 ಜೂನ್ 2026 ಪ್ರಮುಖ ಲಿಂಕ್‌ಗಳು ಅಧಿಕೃತ ಅಧಿಸೂಚನೆ PDF ಆನ್‌ಲೈನ್ ಅರ್ಜಿ ಸಲ್ಲಿಕೆ ಅಧಿಕೃತ ವೆಬ್‌ಸೈಟ್: bellarydcc.bank.in ಉದ್ಯೋಗಾಕಾಂಕ್ಷಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ಅಧಿಸೂಚನೆಯನ್ನು ಗಮನವಿಟ್ಟು ಓದುವುದು ಕಡ್ಡಾಯ. ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಚಿಕ್ಕಬಳ್ಳಾಪುರ ಡಿಸಿ ಕಚೇರಿಯಲ್ಲಿ ಖಾಲಿ ಇರುವ 169 ಹುದ್ದೆಗಳಿಗೆ ಅರ್ಜಿ ಆಹ್ವಾನ 3991 ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ: 35 ವರ್ಷದವರೆಗೆ ವಯೋಮಿತಿ ಸಡಿಲಿಕೆ