Sage Markandeya: ಮಾರ್ಕಂಡೇಯ ಮರ್ಹಷಿಗಳು. ಪುರಾಣದ ಕಥೆಗಳಲ್ಲಿ ಮಾರ್ಕಂಡೆಯ ಮಹರ್ಷಿಗಳ ಹೆಸರು ಕೇಳಿರುತ್ತೇವೆ. ಅಲ್ಪಾಯುಷ್ಯದಲ್ಲೇ ಅನೇಕ ಸಾಧನೆ ಮಾಡಿದ ಮಾರ್ಕಂಡೆಯ ಮಹರ್ಷಿಗಳ ಕಥೆ ಇಲ್ಲಿದೆ. ಮಾರ್ಕಂಡೇಯ ಮರ್ಹಷಿಗಳು. ಪುರಾಣದ ಕಥೆಗಳಲ್ಲಿ ಮಾರ್ಕಂಡೆಯ ಮಹರ್ಷಿಗಳ ಹೆಸರು ಕೇಳಿರುತ್ತೇವೆ. ಅಲ್ಪಾಯುಷ್ಯದಲ್ಲೇ ಅನೇಕ ಸಾಧನೆ ಮಾಡಿದ ಮಾರ್ಕಂಡೆಯ ಮಹರ್ಷಿಗಳ ಕಥೆ ಇಲ್ಲಿದೆ. ಮಾರ್ಕಂಡೇಯರು ಭಕ್ತಶ್ರೇಷ್ಠರು, ಇವರು ಭ್ರಗುವಂಶದ ಮೈಕಂಡುವೆಂಬ ಮಹರ್ಷಿಗಳ ಪುತ್ರರು. ಮಗುವು ಜನಿಸಿದಾಗ ದೈವಜ್ಞರು ಇವನ ಗ್ರಹಗತಿಯನ್ನು ವೀಕ್ಷಿಸಿ. ಇವನಿಗೆ ಕೇವಲ ಹದಿನಾಲ್ಕು ವರ್ಷ ಆಯುಷ್ಯವೆಂದು ಹೇಳಿದ್ದರು. ಒಂದು ದಿನ ತಾಯಿ-ತಂದೆಯರು ತನ್ನ ಅಲ್ಪಾಯುಷ್ಕದ ವಿಷಯವಾಗಿ ಶೋಕಿಸುತ್ತಿದ್ದುದು ಹುಡುಗನ ಕಿವಿಗೆ ಬಿತು. ತಂದೆಯ ಮಾತಿನಂತೆ ಬಾಲಕ ಮಾರ್ಕಂಡೇಯನು ಈಶ್ವರನ ಆರಾಧನೆಯಲ್ಲಿ ತೊಡಗಿದನು. ‘ಚಂದ್ರಶೇಖರನನ್ನು ಆಶಯಿಸಿದರೆ ಯಮನೂ ಏನೂ ಮಾಡಲಾರನು’ ಎಂಬ ಬಾಲಕನ ನಂಬಿಕೆಯನ್ನು ಈಶ್ವರನು ಹುಸಿಮಾಡಲಿಲ್ಲ. ಶಿವನ ಸಮೀಪದಿಂದ ಯಮನಿಗೆ ಬಾಲಕನನ್ನು ಕರೆದೊಯ್ಯಲಾಗಲಿಲ್ಲ. ಹೀಗೆ ತನ್ನ ದೃಢಭಕ್ತಿಯಿಂದ ಯಮನನ್ನೇ ಸೋಲಿಸಿದ ಮಹಾಮಹಿಮರು ಮಾರ್ಕಂಡೇಯರು. ಅನಂತರ ಪರಮೇಶ್ವರನು ಹದಿನಾಲ್ಕು ಕಲ್ಪಗಳ ದೀರ್ಘಾಯುಷ್ಯವನ್ನು ಅವರಿಗೆ ಕರುಣಿಸಿದನು. ಇದು ವಿಷ್ಣುಪುರಾಣದಲ್ಲಿ ಮಾರ್ಕಂಡೇಯರ ವಿಷಯವಾಗಿರುವ ಕಥೆಯಾದರೆ, ನೈಸಿಂಹಪುರಾಣವು ಮಾರ್ಕಂಡೇಯರು ವಿಷ್ಣುವನ್ನು ಕುರಿತು ತಪಸ್ಸು ಮಾಡಿ ಕೇವಲ ಹನ್ನೆರಡುವರ್ಷವಿದ್ದ ತಮ್ಮ ಆಯಸ್ಸನ್ನು ಹದಿನಾಲ್ಕು ಕಲ್ಪಗಳಿಗೆ ವೃದ್ಧಿಪಡಿಸಿಕೊಂಡರೆಂದು ಹೇಳುತ್ತದೆ. ಶಿವ-ವಿಷ್ಣುಗಳಲ್ಲಿ ಅಭೇದವನ್ನು ಸಾಧಿಸಿದ ಮಹಾಮಹಿಮರು ಇವರೆಂಬುದು ಶತಃಸಿದ್ಧ. ಶಿವನಿಂದಲೇ ಮಾರ್ಕಂಡೇಯರು ನಾರಾಯಣನಲ್ಲಿ ಅನನ್ಯಭಕ್ತಿಯು ಸ್ಥಿರವಾಗಲೆಂದು ವರಪಡೆದವರು. ಜ್ಞಾನವೈರಾಗ್ಯಗಳ ನಿಧಿಯಾಗುವಂತೆಯೂ ಪುರಾಣಾಚಾರ್ಯರಾಗುವಂತೆಯೂ ಶಿವನೇ ಇವರಿಗೆ ಆದೇಶ ನೀಡಿದ್ದನು. ಜಗತ್ತಿನ ಪ್ರಳಯ ಸಂಭವಿಸಿದಾಗ ಇಡೀ ಭೂಮಿ ಜಲಮಯವಾಗಿರುತ್ತದೆ. ಈ ಸಂದರ್ಭದಲ್ಲಿ ದೇವಾಸುರರಾಗಲೀ ಮನುಷ್ಯರಾಗಲೀ ವೃಕ್ಷಗಳಾಗಲೀ ಉಳಿಯು ವುದಿಲ್ಲ. ಮಾರ್ಕಂಡೇಯರು ಇಂತಹ ಪ್ರಳಯವನ್ನು ಕಣ್ಣಾರೆ ಕಂಡವರು. ಜಲರಾಶಿಯ ಮಧ್ಯೆ ಭ್ರಾಂತರಾಗಿ, ಯಾವ ಪ್ರಾಣಿಯನ್ನೂ ಕಾಣದೆ ತಿರುಗಾಡುತ್ತಿದ್ದಾಗ, ಒಂದು ಹಡೆಯಲ್ಲಿ ವಿಶಾಲವಾದ ಆಲದ ಮರವನ್ನು ಕಂಡರು. ಅದರ ಶಾಖೆಗಳ ಮೇಲೆ ಒಂದು ದಿವ್ಯವಾದ ಮಂಚದಲ್ಲಿ ಸುಂದರವಾದ ಮಗುವೊಂದು ಮಲಗಿರುವುದನ್ನು ಅವರು ನೋಡಿದರು. ಭೂತಭವಿಷ್ಯದ್ವರ್ತಮಾನಗಳನ್ನು ಬಲ್ಲ, ಧ್ಯಾನಯೋಗಿಗಳಾದ ದುಹರ್ಷಿಗಳಿಗೂ ಆ ಮಗು ಯಾರೆಂದು ತಕ್ಷಣ ಹೊಳೆಯಲಿಲ್ಲ. ಆ ಮಗುವೇ ಮಾರ್ಕಂಡೇಯರನ್ನು ಉದ್ದೇಶಿಸಿ “ಮುನಿವರ್ಯಾ! ನೀನು ಬಹಳವಾಗಿ ಬಳಲಿ ಬಂದಿರುತ್ತೀಯೆ. ನೀನು ಈಗ ವಿಶ್ರಾಂತಿಯನ್ನು ಅಪೇಕ್ಷಿಸುತ್ತೀಯೆಂದು ನನಗೆ ಗೊತ್ತು ನನ್ನ ಶರೀರದಲ್ಲಿ ಪ್ರವೇಶಿಸಿ ನೀನು ವಿಶ್ರಾಂತಿಸುಖವನ್ನು ಅನುಭವಿಸಬಹುದು” ಎಂದು ಹೇಳುತ್ತ ತನ್ನ ಬಾಯನ್ನು ತೆರೆಯಿತು. ಮಾರ್ಕಂಡೇಯರು ತಮ್ಮ ಪ್ರಯತ್ನವಿಲ್ಲದೆಯೇ ಅದರ ಬಾಯಿಯೊಳಗೆ ಪ್ರವೇಶಿಸಿದರು. ಹಾಗೆಯೇ ಮುಂದೆ ಹೋಗುತ್ತ ಮಗುವಿನ ಉದರವನ್ನು ಸೇರಿದರು. ಮುಂತಾದವುಗಳಿಂದ ಕೂಡಿದ್ದ ಇಡೀ ಬ್ರಹ್ಮಾಂಡವನ್ನು ಕಂಡರು. ಯಜ್ಞಯಾಗಾದಿಗಳು, ಯುದ್ಧಗಳು, ವ್ಯಾಪಾರ ಮುಂತಾದ ಎಲ್ಲ ಕರ್ಮಗಳೂ ಎಂಂದಿನಂತೆ ನಡೆಯುತ್ತಿದ್ದವು. ಇಂದ್ರಾದಿ ದೇವತೆಗಳೂ ಅಲ್ಲಿಯೇ ಉಪಸ್ಥಿತರಿದ್ದರು. ಪ್ರಳಯದ ಮೊದಲು ಮೂರು ಲೋಕಗಳೂ ಹೇಗಿದ್ದವೋ ಹಾಗೆಯೇ ಶಿಶುವಿನ ಉದರದಲ್ಲಿ ಸುರಕ್ಷಿತವಾಗಿದ್ದವು. ಮುನಿಗಳು ತಮ್ಮ ಪ್ರಯತ್ನವಿಲ್ಲದೆಯೇ ನಿರಾಯಾಸವಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುತ್ತ ಎಲ್ಲವನ್ನೂ ನೋಡುತ್ತಿದ್ದರು. ಅವರಿಗೆ ಈಗ ಹಸಿವೆಯಾಗತೊಡಗಿತು. ಹಾಗೆ ಎನಿಸುತ್ತಿದ್ದಂತೆ ಉತ್ತಮವಾದ ಕಂದಮೂಲಫಲಗಳು ಸಿದ್ಧವಾದವು. ಹೀಗೆಯೇ ಸುತ್ತಾಡುತ್ತ ನೂರಾರು ವರ್ಷಗಳು ಕಳೆದುಹೋದವು. ಎಷ್ಟು ಸುತ್ತಾಡಿದರೂ ಅದರ ಅಂತ್ಯವೇ ಸಿಗಲಿಲ್ಲ. ಭ್ರಾಂತರಾದ ಮುನಿಗಳು ಎಲ್ಲವೂ ಪರಮಪುರುಷನ ಸಂಕಲ್ಪವೆಂದು ನಿಶ್ಚಯಿಸಿ. ಅನನ್ಯಶರಣನಾದ ಆ ಪುರುಷೋತ್ತಮನನ್ನೇ ಪರಮಭಕ್ತಿಯಿಂದ ಸ್ತೋತ್ರ ಮಾಡಿದರು. ಬಹಳ ಹೊತ್ತು ಕಣ್ಣುಗಳನ್ನು ಮುಚ್ಚಿಕೊಂಡು ಸ್ತೋತ್ರ ಮಾಡುತ್ತಿದ್ದ ಅವರು ಕಣ್ಣು ತೆರೆದಾಗ ಹಿಂದಿನಂತೆಯೇ ಆಲದೆಲೆಯ ಮೇಲೆ ಆಡುತ್ತಿದ್ದ ಆ ಮಗುವನ್ನು ಮಾತ್ರ ಕಂಡರು. ಮಗುವು ಋಷಿಗಳನ್ನು ನೋಡಿ ಒಮ್ಮೆ ಮುದ್ದಾಗಿ ನಗೆ ಬೀರಿತು. ಮರುಕ್ಷಣದಲ್ಲಿಯೇ ಅವರ ಹೃದಯದಲ್ಲಿ ಜ್ಯೋತಿಯೊಂದು ಬೆಳಗಿದಂತಾಯಿತು; ಪರಮಾದ್ಭುತವಾದ ದಿವ್ಯಜ್ಞಾನವನ್ನು ಪಡೆದ ಅನುಭವವಾಯಿತು. ಮಗುವಿನ ಕಮಲದಂತಹ ಪಾದಗಳಿಗೆ ಭಕ್ತಿಯಿಂದ ನಮಿಸಿದರು. ಅವರ ಕಣ್ಣುಗಳಿಂದ ಆನಂದಭಾಷ್ಪವು ಧಾರಾಕಾರವಾಗಿ ಸುರಿಯುತ್ತಿದ್ದಿತು. ಸಕಲ ಜಗತ್ತನ್ನೂ ನುಂಗಿ, ಏನೂ ತಿಳಿಯದ ಶಿಶುವಿನಂತೆ ಮಲಗಿರುವ ಆದಿಪುರುಷನ ಮಾಯೆಯನ್ನು ಹೀಗೆ ಮಹರ್ಷಿಗಳು ಕಣ್ಣಾರೆ ಕಂಡರು. ಆ ಶಿಶುವೇ ಮಾರ್ಕಂಡೇಯರಿಗೆ ಸೃಷ್ಟಿಯ ರಹಸ್ಯವನ್ನು ವಿಸ್ತರಿಸಿ ಹೇಳಿತು. ಭಗವದ್ಗೀತೆಯ ವಿಶ್ವರೂಪದರ್ಶನದಂತೆಯೇ ಬಾಲಮುಕುಂದನು ಮಾರ್ಕಂಡೇಯರಿಗೆ ತನ್ನ ನಿಜರೂಪದ ದರ್ಶನವನ್ನಿತ್ತನು. ತನ್ನ ಮಾಯೆಯ ಪ್ರಭಾವವನ್ನು ವಿಸ್ತಾರವಾಗಿ ವಿವರಿಸಿದನು. ಈ ರೀತಿಯಲ್ಲಿ ಮಾರ್ಕಂಡೇಯರ ಚರಿತ್ರೆಯನ್ನು ಭಾರತವು ವರ್ಣಿಸಿದೆ. ಅವರು ರಚಿಸಿರುವ ಮಹಾಮೃತ್ಯುಂಜಯಸ್ತೋತ್ರ, ಚಂದ್ರಶೇಖರಾ ಮುಂತಾದ ಸ್ತುತಿಗಳು ಸರ್ವರಿಗೂ ಪ್ರಿಯವಾಗಿವೆ. ಶಂಕರಾಚಾರ್ಯರೂ ತಮ್ಮ ನರ್ಮದಾಷ್ಟಕದಲ್ಲಿ, ನರ್ಮದೆಯು ಈ ಮಹಾತ್ಮರಿಗೆ ಜಗತ್ಥಳಯಕಾಲದಲ್ಲಿ ಸಳೆ ನೀಡಿದಳೆಂದು ಹೊಗಳಿದ್ದಾರೆ. ಉತ್ತರ ಪ್ರದೇಶದ ಗೋಮತಿ ಮತ್ತು ಸರಯ ನದಿಗಳ ಸಂಗಮಪ್ರದೇಶದಲ್ಲಿರುವ ಭಾಗೇಶ್ವರವೆಂಬ ಸ್ಥಾನದಲ್ಲಿ ಈಗಲೂ ಮಾರ್ಕಂಡೇಯರ ಆಶ್ರಮವಿದೆ. ಮಾರ್ಕಂಡೇಯರು ನಮ್ಮ ಸಂಸ್ಕೃತಿಯಲ್ಲಿ ಪ್ರಾತಃಸ್ಮರಣೀಯರೆನಿಸಿದ್ದಾರೆ. ಆಕರ ಗ್ರಂಥ: ಪ್ರಾಚೀನ ಭಾರತದ ಮಹರ್ಷಿಗಳು ಪುಸ್ತಕ ಭಾಗ -1 ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ರಾವಣ, ಕುಂಭಕರ್ಣ ಮತ್ತು ಕುಬೇರನ ತಂದೆ ಪುಲಸ್ತ್ಯ ಮಹರ್ಷಿಗಳ ಕಥೆ ಭಗೀರಥ ಜಯಂತಿ: ಪೂರ್ವಜರ ಶಾಪ ಮತ್ತು ಭಗೀರಥನ ಅಂತರಂಗದ ತಳಮಳ