ನವದೆಹಲಿ, ಮೇ 15: ರೈಲ್ವೆ (Railway) ಎಎಲ್‌ಪಿ (Assistant Loco Pilot) ಹುದ್ದೆಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಇಲಾಖೆ ಸಹಿ ಸುದ್ದಿ ಬಂದಿದೆ. ರೈಲ್ವೆ ರಿಕ್ರೂಟ್‌ಮೆಂಟ್ ಬೋರ್ಡ್ (RRB) ವತಿಯಿಂದ ಅಸಿಸ್ಟೆಂಟ್ ಲೋಕೋ ಪೈಲಟ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಅಧಿಸೂಚನೆಯ ಪ್ರಕಾರ, ಈ ನೇಮಕಾತಿಯ ಮೂಲಕ ಒಟ್ಟು 11,127 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಅರ್ಜಿಗಳನ್ನು ಮೇ 15 ರಿಂದ ಜೂನ್ 14ರವರೆಗೆ ಸ್ವೀಕರಿಸಲಾಗುತ್ತದೆ. ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ರೈಲ್ವೆಯ ಅಧಿಕೃತ ವೆಬ್‌ಸೈಟ್ rrbapply.gov.in ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು. ಬೇರೆ ಯಾವುದೇ ವಿಧಾನದಲ್ಲಿ ಸಲ್ಲಿಸಿದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಪ್ರಮುಖ ದಿನಾಂಕಗಳು ಉದ್ಯೋಗ ಸುದ್ದಿಯಲ್ಲಿ ಜಾಹೀರಾತು ಪ್ರಕಟವಾದ ದಿನಾಂಕ: 21 ಮಾರ್ಚ್ 2026 ಆನ್‌ಲೈನ್ ಅರ್ಜಿ ಪ್ರಾರಂಭ ದಿನಾಂಕ: 15 ಮೇ 2026 ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 14 ಜೂನ್ 2026 ಶುಲ್ಕ ಪಾವತಿ ಕೊನೆಯ ದಿನಾಂಕ: 16 ಜೂನ್ 2026 ಅರ್ಜಿಯಲ್ಲಿ ತಿದ್ದುಪಡಿ ಮಾಡುವ ದಿನಾಂಕಗಳು: 17 ರಿಂದ 26 ಜೂನ್ 2026 ಅರ್ಹತೆ ರೈಲ್ವೆ ಅಸಿಸ್ಟೆಂಟ್ ಲೋಕೋ ಪೈಲಟ್ ನೇಮಕಾತಿ 2026ಕ್ಕೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಮಾನ್ಯತೆ ಪಡೆದ ಮಂಡಳಿ ಅಥವಾ ಸಂಸ್ಥೆಯಿಂದ 10ನೇ ತರಗತಿ ಜೊತೆಗೆ ಐಟಿಐ (ITI) ಉತ್ತೀರ್ಣರಾಗಿರಬೇಕು. ಅಥವಾ 10ನೇ ತರಗತಿಯೊಂದಿಗೆ ಇಂಜಿನಿಯರಿಂಗ್ ಡಿಪ್ಲೊಮಾ ಪಡೆದಿರಬೇಕು. ಇಂಜಿನಿಯರಿಂಗ್ ಪದವಿ ಪಡೆದ ಅಭ್ಯರ್ಥಿಗಳೂ ಸಹ ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅಭ್ಯರ್ಥಿಯ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 30 ವರ್ಷ ಮೀರಿರಬಾರದು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷದ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ. ಇತರೆ ಮೀಸಲು ವರ್ಗಗಳು ಮತ್ತು ಮಾಜಿ ಸೈನಿಕರಿಗೆ ನಿಯಮಾನುಸಾರ ವಯೋಮಿತಿ ವಿನಾಯಿತಿ ಲಭ್ಯವಿರುತ್ತದೆ. ವಯಸ್ಸಿನ ಲೆಕ್ಕಾಚಾರವನ್ನು 1 ಜುಲೈ 2026 ಆಧಾರವಾಗಿ ಪರಿಗಣಿಸಲಾಗುತ್ತದೆ. ಅರ್ಜಿ ಶುಲ್ಕ ಸಾಮಾನ್ಯ / ಒಬಿಸಿ / ಇಡಬ್ಲ್ಯೂಎಸ್ ಅಭ್ಯರ್ಥಿಗಳು: ₹500 ಎಸ್‌ಸಿ / ಎಸ್‌ಟಿ / ದಿವ್ಯಾಂಗ ಅಭ್ಯರ್ಥಿಗಳು: ₹250 ಸಿಬಿಟಿ-1 ಪರೀಕ್ಷೆಯ ನಂತರ General / OBC / EWS ಅಭ್ಯರ್ಥಿಗಳಿಗೆ ₹400 ಹಾಗೂ SC / ST / PH (Divyang) ಅಭ್ಯರ್ಥಿಗಳಿಗೆ ಪೂರ್ಣ ಶುಲ್ಕವನ್ನು ಮರುಪಾವತಿಸಲಾಗುತ್ತದೆ. ಆಯ್ಕೆ ಪ್ರಕ್ರಿಯೆ ಈ ನೇಮಕಾತಿಯಲ್ಲಿ ಅಭ್ಯರ್ಥಿಗಳು ಮೊದಲು 1ನೇ ಹಂತದ CBT-1 ಮತ್ತು 2ನೇ ಹಂತದ CBT-2 ಪರೀಕ್ಷೆಗಳಲ್ಲಿ ಭಾಗವಹಿಸಬೇಕು. ನಂತರ ಕಂಪ್ಯೂಟರ್ ಆಧಾರಿತ ಸಾಮರ್ಥ್ಯ ಪರೀಕ್ಷೆ (CBAT), ದಾಖಲೆ ಪರಿಶೀಲನೆ (DV) ಮತ್ತು ವೈದ್ಯಕೀಯ ಪರೀಕ್ಷೆ (ME) ನಡೆಸಲಾಗುತ್ತದೆ. ಎಲ್ಲಾ ಹಂತಗಳು ಪೂರ್ಣಗೊಂಡ ನಂತರ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲಾಗುತ್ತದೆ. ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದ ಅಭ್ಯರ್ಥಿಗಳಿಗೆ ಖಾಲಿ ಹುದ್ದೆಗಳಿಗೆ ನೇಮಕಾತಿ ನೀಡಲಾಗುತ್ತದೆ. ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಸೈಬರ್ ಭದ್ರತಾ ಕ್ಷೇತ್ರದಲ್ಲಿ ಉದ್ಯೋಗಾವಕಾಶ; ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಮಾಹಿತಿ ಜೆಸ್ಕಾಂನಲ್ಲಿ ಉದ್ಯೋಗಾವಕಾಶ: 275 ಹುದ್ದೆಗಳಿಗೆ ಅರ್ಜಿ ಆಹ್ವಾನ