KSP ನೇಮಕಾತಿ 2026: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ (KSP) ವತಿಯಿಂದ ಒಟ್ಟು 41 ಎಂಜಿನ್ ಡ್ರೈವರ್(ಹೆಡ್ ಕಾನ್ಸ್‌ಟೇಬಲ್ ಗ್ರೇಡ್) ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಗೃಹ ಸಚಿವಾಲಯದ ಕರಾವಳಿ ಭದ್ರತಾ ಯೋಜನೆ (Coastal Security Scheme – Phase 1) ಅಡಿಯಲ್ಲಿ ಕರ್ನಾಟಕದ ಕರಾವಳಿ ಭದ್ರತಾ ಪೊಲೀಸ್ ಠಾಣೆಗಳಿಗಾಗಿ ಈ ಹುದ್ದೆಗಳನ್ನು ಮಂಜೂರು ಮಾಡಲಾಗಿದೆ. ಉದ್ಯೋಗಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು 06 ಜೂನ್ 2026 ರೊಳಗೆ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹುದ್ದೆಗಳ ವಿವರ ಸಂಸ್ಥೆಯ ಹೆಸರು: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ (KSP)ಒಟ್ಟು ಹುದ್ದೆಗಳು: 41ಉದ್ಯೋಗ ಸ್ಥಳ: ಉಡುಪಿ, ಬೆಂಗಳೂರು – ಕರ್ನಾಟಕವೇತನ: 26,450 ರೂ. ರಿಂದ 75,000 ರೂ. ಪ್ರತಿ ತಿಂಗಳು ಹುದ್ದೆಹುದ್ದೆಗಳ ಸಂಖ್ಯೆವಯೋಮಿತಿಬೋಟ್ ಕ್ಯಾಪ್ಟನ್ (ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಗ್ರೇಡ್)2ಗರಿಷ್ಠ 58 ವರ್ಷಸಹಾಯಕ ಬೋಟ್ ಕ್ಯಾಪ್ಟನ್ (ಸಹಾಯಕ ಸಬ್ ಇನ್ಸ್‌ಪೆಕ್ಟರ್ ಗ್ರೇಡ್)10ಗರಿಷ್ಠ 58 ವರ್ಷಮೋಟಾರ್ ಲಾಂಚ್ ಮೆಕಾನಿಕ್ (ಸಹಾಯಕ ಸಬ್ ಇನ್ಸ್‌ಪೆಕ್ಟರ್ ಗ್ರೇಡ್)2ಗರಿಷ್ಠ 58 ವರ್ಷಎಂಜಿನ್ ಡ್ರೈವರ್ (ಹೆಡ್ ಕಾನ್ಸ್‌ಟೇಬಲ್ ಗ್ರೇಡ್)12ಗರಿಷ್ಠ 58 ವರ್ಷಖಲಾಸಿ (ಪೊಲೀಸ್ ಕಾನ್ಸ್‌ಟೇಬಲ್ ಗ್ರೇಡ್)4ಗರಿಷ್ಠ 58 ವರ್ಷಸೈಬರ್ ಸೆಕ್ಯೂರಿಟಿ ಅನಾಲಿಸ್ಟ್825–35 ವರ್ಷಡಿಜಿಟಲ್ ಫೋರೆನ್ಸಿಕ್ ಅನಾಲಿಸ್ಟ್325–35 ವರ್ಷ ಶೈಕ್ಷಣಿಕ ಅರ್ಹತೆ ಅಭ್ಯರ್ಥಿಗಳು ಮಾನ್ಯತೆ ಪಡೆದ ಶಿಕ್ಷಣ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಕೆಳಗಿನ ವಿದ್ಯಾರ್ಹತೆ ಹೊಂದಿರಬೇಕು. ಹುದ್ದೆವಿದ್ಯಾರ್ಹತೆಬೋಟ್ ಕ್ಯಾಪ್ಟನ್10ನೇ ತರಗತಿಸಹಾಯಕ ಬೋಟ್ ಕ್ಯಾಪ್ಟನ್10ನೇ ತರಗತಿಮೋಟಾರ್ ಲಾಂಚ್ ಮೆಕಾನಿಕ್10ನೇ ತರಗತಿಎಂಜಿನ್ ಡ್ರೈವರ್10ನೇ ತರಗತಿ, ITIಖಲಾಸಿ10ನೇ ತರಗತಿಸೈಬರ್ ಸೆಕ್ಯೂರಿಟಿ ಅನಾಲಿಸ್ಟ್BCA, BE/B.Tech, MCA, M.Scಡಿಜಿಟಲ್ ಫೋರೆನ್ಸಿಕ್ ಅನಾಲಿಸ್ಟ್BCA, BE/B.Tech, MCA, M.Sc ವೇತನ ವಿವರ ಹುದ್ದೆಮಾಸಿಕ ವೇತನಬೋಟ್ ಕ್ಯಾಪ್ಟನ್₹39,100ಸಹಾಯಕ ಬೋಟ್ ಕ್ಯಾಪ್ಟನ್₹31,050ಮೋಟಾರ್ ಲಾಂಚ್ ಮೆಕಾನಿಕ್₹31,050ಎಂಜಿನ್ ಡ್ರೈವರ್₹28,750ಖಲಾಸಿ₹26,450ಸೈಬರ್ ಸೆಕ್ಯೂರಿಟಿ ಅನಾಲಿಸ್ಟ್₹75,000ಡಿಜಿಟಲ್ ಫೋರೆನ್ಸಿಕ್ ಅನಾಲಿಸ್ಟ್₹50,000 ವಯೋಮಿತಿ ಸಡಿಲಿಕೆ: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ನಿಯಮಾನುಸಾರ ಅನ್ವಯವಾಗುತ್ತದೆ. ಅರ್ಜಿ ಸಲ್ಲಿಸುವ ವಿಧಾನ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಹಂತಗಳು KSP ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಹತೆಯನ್ನು ಪರಿಶೀಲಿಸಿ. ಮಾನ್ಯ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಸಿದ್ಧವಾಗಿಟ್ಟುಕೊಳ್ಳಿ. ಗುರುತಿನ ಚೀಟಿ, ವಯಸ್ಸಿನ ಪ್ರಮಾಣಪತ್ರ, ಶೈಕ್ಷಣಿಕ ದಾಖಲೆಗಳು, ಫೋಟೋ, ಅನುಭವ ಪ್ರಮಾಣಪತ್ರ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ. ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ ಸರಿಯಾಗಿ ಭರ್ತಿ ಮಾಡಿ. ಅನ್ವಯಿಸಿದರೆ ಅರ್ಜಿ ಶುಲ್ಕ ಪಾವತಿಸಿ. ಸಲ್ಲಿಸುವ ಮೊದಲು ಎಲ್ಲಾ ಮಾಹಿತಿಯನ್ನು ಮರುಪರಿಶೀಲಿಸಿ. ಅರ್ಜಿಯನ್ನು ನೋಂದಾಯಿತ ಅಂಚೆ/ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಿ. ಅರ್ಜಿ ಸಲ್ಲಿಸುವ ವಿಳಾಸ ಎಂಜಿನ್ ಡ್ರೈವರ್ ಹುದ್ದೆಗಳಿಗೆ: The Superintendent of Police,Coastal Security Police,Udupi & Member Secretary to Special Recruitment Committee for Technical Posts,Malpe, Udupi. Cyber Security Analyst ಹುದ್ದೆಗಳಿಗೆ: No.01, Infantry Road,Commissioner of Police,Bengaluru – 560001 ಇಮೇಲ್ ಮೂಲಕವೂ ಕಳುಹಿಸಬಹುದು: dminbcp@ksp.gov.in ಪ್ರಮುಖ ದಿನಾಂಕಗಳು ಅರ್ಜಿ ಆರಂಭ ದಿನಾಂಕ: 08-05-2026ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 06-06-2026 Cyber Security Analyst ಮತ್ತು Digital Forensic Analyst ಹುದ್ದೆಗಳಿಗೆ ಕೊನೆಯ ದಿನಾಂಕ: 24-05-2026 ಅಧಿಕೃತ ವೆಬ್‌ಸೈಟ್ Karnataka State Police (KSP) Official Website ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಜೆಸ್ಕಾಂನಲ್ಲಿ ಉದ್ಯೋಗಾವಕಾಶ: 275 ಹುದ್ದೆಗಳಿಗೆ ಅರ್ಜಿ ಆಹ್ವಾನ ಕೇಂದ್ರ ಸರ್ಕಾರಿ ಹುದ್ದೆಗಳಿಗೆ ಭರ್ತಿ: ಯಾವುದೇ ಪರೀಕ್ಷೆ ಇಲ್ಲಿದೆ ನೇರ ನೇಮಕಾತಿ, ಇಲ್ಲಿದೆ ವಿವರ