ನವದೆಹಲಿ, ಮೇ 29: ಪ್ರಧಾನಿ ನರೇಂದ್ರ ಮೋದಿ ಅವರ ‘ಮೇಕ್ ಇನ್ ಇಂಡಿಯಾ’ ಮತ್ತು ‘ವೋಕಲ್ ಫಾರ್ ಲೋಕಲ್’ ಕರೆಗೆ ಓಗೊಟ್ಟು, ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (KVIC) 2025-26ರ ಹಣಕಾಸು ವರ್ಷದಲ್ಲಿ ಬರೋಬ್ಬರಿ 1,87,105 ಕೋಟಿ ರೂ. ವಹಿವಾಟು ನಡೆಸುವ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದೆ.

ಗಮನಾರ್ಹ ಮುಖ್ಯಾಂಶಗಳು:

6 ಪಟ್ಟು ಜಿಗಿತ: ಕಳೆದ 12 ವರ್ಷಗಳಲ್ಲಿ ಖಾದಿ ಉತ್ಪನ್ನಗಳ ಮಾರಾಟ ಶೇ. 501 ರಷ್ಟು (6 ಪಟ್ಟು) ಹಾಗೂ ಉತ್ಪಾದನೆ ಶೇ. 380 ರಷ್ಟು ದಾಖಲೆಯ ವೃದ್ಧಿ ಕಂಡಿದೆ.

ಕೋಟಿ ಕೋಟಿ ಉದ್ಯೋಗ: ಈ ವಲಯದಲ್ಲಿ ಉದ್ಯೋಗ ಸೃಷ್ಟಿ ಶೇ. 56 ರಷ್ಟು ಹೆಚ್ಚಳವಾಗಿದ್ದು, ಒಟ್ಟು 2.04 ಕೋಟಿ ಜನರಿಗೆ ಉದ್ಯೋಗ ನೀಡಲಾಗಿದೆ. ಪಿಎಂಇಜಿಪಿ (PMEGP) ಯೋಜನೆ ಒಂದರಿಂದಲೇ ಪ್ರಸಕ್ತ ವರ್ಷ 7.31 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ.

ಮಹಿಳಾ ಸಬಲೀಕರಣ: ಖಾದಿ ವಲಯದ ಒಟ್ಟು ಕುಶಲಕರ್ಮಿಗಳಲ್ಲಿ ಶೇ. 80 ಕ್ಕಿಂತ ಹೆಚ್ಚು ಮಹಿಳೆಯರಿದ್ದಾರೆ. ಈ ವರ್ಷ ತರಬೇತಿ ಪಡೆದವರಲ್ಲಿ ಶೇ. 59 ರಷ್ಟು ಮಹಿಳೆಯರೇ ಆಗಿದ್ದಾರೆ.

ಕುಶಲಕರ್ಮಿಗಳ ಆದಾಯ ಹೆಚ್ಚಳ: ನೂಲುವ ಕುಶಲಕರ್ಮಿಗಳ ಸಂಭಾವನೆ ಪ್ರತಿ ಹ್ಯಾಂಕ್‌ಗೆ 4 ರಿಂದ 15 ರೂ. ಗೆ ಅಂದರೆ ಶೇ. 275 ರಷ್ಟು ಭಾರಿ ಏರಿಕೆಯಾಗಿದೆ.

ರಾಷ್ಟ್ರಧ್ವಜದ ಹೆಮ್ಮೆ: ‘ಹರ್ ಘರ್ ತಿರಂಗಾ’ ಅಭಿಯಾನದ ಪ್ರಭಾವದಿಂದ ಖಾದಿ ರಾಷ್ಟ್ರಧ್ವಜಗಳ ಮಾರಾಟ ₹2.35 ಕೋಟಿಗೆ ಏರಿದೆ.

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *