ಮೈಸೂರಿನ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (CESCOM) ಅಪ್ರೆಂಟಿಸ್ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 200 ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಪ್ರಕಟಿಸಲಾಗಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಮೇ 29, 2026ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಮೈಸೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಉದ್ಯೋಗಾವಕಾಶ ಹುಡುಕುತ್ತಿರುವ ಪದವೀಧರರು, ಇಂಜಿನಿಯರಿಂಗ್ ಪದವೀಧರರು, ಡಿಪ್ಲೊಮಾ ಹಾಗೂ ಇಂಜಿನಿಯರಿಂಗ್ ಅಲ್ಲದ ಪದವಿ ಪಡೆದ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. 2022 ರಿಂದ 2026ರವರೆಗೆ ಪದವಿ ಅಥವಾ ಡಿಪ್ಲೊಮಾ ಪೂರ್ಣಗೊಳಿಸಿದವರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಹುದ್ದೆಗಳ ವಿವರ ಹೀಗಿದೆ: ಎಂಜಿನಿಯರಿಂಗ್ ಪದವೀಧರ ಅಪ್ರೆಂಟಿಸ್ – 80 ಹುದ್ದೆಗಳು, ತಿಂಗಳಿಗೆ 12,300 ರೂ. ಸ್ಟೈಫಂಡ್ ತಂತ್ರಜ್ಞ ಡಿಪ್ಲೊಮಾ ಅಪ್ರೆಂಟಿಸ್ – 55 ಹುದ್ದೆಗಳು, ತಿಂಗಳಿಗೆ 10,900 ರೂ. ಸ್ಟೈಫಂಡ್ ಪದವಿ ಅಪ್ರೆಂಟಿಸ್ (ಇಂಜಿನಿಯರಿಂಗ್ ಅಲ್ಲದ) – 65 ಹುದ್ದೆಗಳು, ತಿಂಗಳಿಗೆ 12,300 ರೂ. ಸ್ಟೈಫಂಡ್ ಅರ್ಹತೆಗಳು: ಎಂಜಿನಿಯರಿಂಗ್ ಪದವೀಧರ ಅಪ್ರೆಂಟಿಸ್ ಹುದ್ದೆಗೆ ಬಿಇ/ಬಿಟೆಕ್ ವಿದ್ಯಾರ್ಹತೆ ಅಗತ್ಯ. ತಂತ್ರಜ್ಞ ಡಿಪ್ಲೊಮಾ ಅಪ್ರೆಂಟಿಸ್‌ಗೆ ಡಿಪ್ಲೊಮಾ ಓದಿರಬೇಕು. ಇಂಜಿನಿಯರಿಂಗ್ ಅಲ್ಲದ ಪದವಿ ಅಪ್ರೆಂಟಿಸ್ ಹುದ್ದೆಗೆ ಬಿಕಾಂ, ಬಿಬಿಎ, ಬಿಎ, ಬಿಸಿಎ ಅಥವಾ ಬಿಎಸ್ಸಿ ಪದವಿ ಹೊಂದಿರಬೇಕು. ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷಗಳಾಗಿರಬೇಕು. ಈ ನೇಮಕಾತಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ. ಆಯ್ಕೆ ಪ್ರಕ್ರಿಯೆ ಹೇಗೆ? ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆ ಆಧಾರಿತ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಅವರ ನೋಂದಾಯಿತ ಇಮೇಲ್ ಮೂಲಕ ಮಾಹಿತಿ ನೀಡಲಾಗುತ್ತದೆ. ಬಳಿಕ ಮೈಸೂರಿನ CESCOM ಕಾರ್ಪೊರೇಟ್ ಕಚೇರಿಯಲ್ಲಿ ದಾಖಲೆಗಳ ಪರಿಶೀಲನೆ ನಡೆಯಲಿದೆ. ಪ್ರಮುಖ ದಿನಾಂಕಗಳು: ಅರ್ಜಿ ಪ್ರಾರಂಭ: ಮೇ 8 ಅರ್ಜಿ ಸಲ್ಲಿಕೆ ಕೊನೆ ದಿನಾಂಕ: ಮೇ 29 ಶಾರ್ಟ್ಲಿಸ್ಟ್ ಪ್ರಕಟಣೆ: ಜೂನ್ 5 ದಾಖಲೆ ಪರಿಶೀಲನೆ: ಜೂನ್ 15 ರಿಂದ 19ರವರೆಗೆ ಅಭ್ಯರ್ಥಿಗಳು CESCOM ಅಧಿಕೃತ ವೆಬ್ಸೈಟ್ cescmysore.karnataka.gov.in ಮೂಲಕ ಅರ್ಜಿ ಸಲ್ಲಿಸಿ, ಅಗತ್ಯ ದಾಖಲೆಗಳನ್ನು ಸಿದ್ಧವಾಗಿಡುವುದು ಅಗತ್ಯ. ಇದು ಸರ್ಕಾರಿ ವಲಯದಲ್ಲಿ ವೃತ್ತಿಜೀವನ ಆರಂಭಿಸಲು ಬಯಸುವವರಿಗೆ ಉತ್ತಮ ಅವಕಾಶವಾಗಿದೆ. ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಯಾದಗಿರಿ ಆರೋಗ್ಯ ಇಲಾಖೆಯಲ್ಲಿ ನೇಮಕಾತಿ: ಆನ್ಲೈನ್ ಅರ್ಜಿ ಆಹ್ವಾನ ಸೈಬರ್ ಭದ್ರತಾ ಕ್ಷೇತ್ರದಲ್ಲಿ ಉದ್ಯೋಗಾವಕಾಶ; ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಮಾಹಿತಿ