ಐಡಿಬಿಐ ಬ್ಯಾಂಕ್ (IDBI Bank) ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಅವಕಾಶವನ್ನು ಒದಗಿಸುತ್ತಿದ್ದು, ದೇಶಾದ್ಯಂತ ಇರುವ ತನ್ನ ವಿವಿಧ ಶಾಖೆಗಳಲ್ಲಿ ಖಾಲಿ ಇರುವ ತಜ್ಞ ಅಧಿಕಾರಿ (Specialist Officers) ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವ ಅರ್ಹ ಅಭ್ಯರ್ಥಿಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಈ ನೇಮಕಾತಿ ಪ್ರಕ್ರಿಯೆಯಡಿಯಲ್ಲಿ ಒಟ್ಟು 33 ತಜ್ಞ ಅಧಿಕಾರಿ ಹುದ್ದೆಗಳು ಭರ್ತಿಯಾಗಲಿದ್ದು, ಅವುಗಳ ಹಂಚಿಕೆ ಈ ಕೆಳಗಿನಂತಿದೆ ಐಟಿ & ಎಂಐಎಸ್ ವಿಭಾಗ – 19 ಹುದ್ದೆಗಳು ಭದ್ರತಾ ಅಧಿಕಾರಿ (ಗ್ರೇಡ್–ಡಿ) – 8 ಹುದ್ದೆಗಳು ಅಪಾಯ ನಿರ್ವಹಣೆ (Risk Management – Information Systems) – 4 ಹುದ್ದೆಗಳು ಆಡಿಟ್ (Information Systems Audit – ಗ್ರೇಡ್–ಸಿ) – 2 ಹುದ್ದೆಗಳು ಅರ್ಜಿ ಪ್ರಕ್ರಿಯೆ ಹೇಗೆ? ಮಾರ್ಚ್ 25, 2026 ರಿಂದ ಆರಂಭವಾಗಿದ್ದು, ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 8, 2026ರೊಳಗಾಗಿ ಬ್ಯಾಂಕಿನ ಅಧಿಕೃತ ವೆಬ್‌ಸೈಟ್ idbibank.in ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ವಿದ್ಯಾರ್ಹತೆ ಐಟಿ & ಎಂಐಎಸ್ ಹುದ್ದೆಗಳಿಗೆ ಕಂಪ್ಯೂಟರ್ ಸೈನ್ಸ್ / ಮಾಹಿತಿ ತಂತ್ರಜ್ಞಾನ / ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಪದವಿ ಅಗತ್ಯ. ಸ್ನಾತಕೋತ್ತರ ಪದವೀಧರರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಅಪಾಯ ನಿರ್ವಹಣೆ ಹಾಗೂ ಆಡಿಟ್ ವಿಭಾಗಗಳಿಗೆ ಸಂಬಂಧಿತ ತಾಂತ್ರಿಕ ಪದವಿ ಕಡ್ಡಾಯವಾಗಿದೆ. ಭದ್ರತಾ ಅಧಿಕಾರಿ ಹುದ್ದೆಗೆ 12ನೇ ತರಗತಿ ಅಥವಾ ಡಿಪ್ಲೊಮಾ ವಿದ್ಯಾರ್ಹತೆಯೊಂದಿಗೆ, ಭಾರತೀಯ ಸಶಸ್ತ್ರ ಪಡೆಗಳಲ್ಲಿ ಕನಿಷ್ಠ 15 ವರ್ಷಗಳ ಕಾಲ ಜೆಸಿಒ (JCO) ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿರಬೇಕು. ಅರ್ಹತೆ ಗ್ರೇಡ್–ಡಿ ಹುದ್ದೆಗಳಿಗೆ – ಕನಿಷ್ಠ 10 ವರ್ಷ ಗ್ರೇಡ್–ಸಿ ಹುದ್ದೆಗಳಿಗೆ – ಕನಿಷ್ಠ 7 ವರ್ಷ ಗ್ರೇಡ್–ಬಿ ಹುದ್ದೆಗಳಿಗೆ – ಕನಿಷ್ಠ 4 ವರ್ಷ ವಯೋಮಿತಿ ಅಭ್ಯರ್ಥಿಗಳ ವಯಸ್ಸು 25 ರಿಂದ 45 ವರ್ಷಗಳೊಳಗೆ ಇರಬೇಕು. ಸರ್ಕಾರದ ನಿಯಮಾನುಸಾರ ಮೀಸಲಾತಿ ವರ್ಗದವರಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ. ಅರ್ಜಿ ಶುಲ್ಕ ಎಷ್ಟು? ಸಾಮಾನ್ಯ / ಓಬಿಸಿ / ಇಡಬ್ಲ್ಯೂಎಸ್ ಅಭ್ಯರ್ಥಿಗಳು – 1050 ರೂ. ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ ಅಭ್ಯರ್ಥಿಗಳು – 250 ರೂ. ಆಯ್ಕೆ ಪ್ರಕ್ರಿಯೆ ಹೇಗೆ? ಆಯ್ಕೆ ಪ್ರಕ್ರಿಯೆ ಹಲವು ಹಂತಗಳಲ್ಲಿ ನಡೆಯಲಿದೆ: ಪ್ರಾಥಮಿಕ ಕಿರುಪಟ್ಟಿ (Shortlisting) ಗುಂಪು ಚರ್ಚೆ (Group Discussion) ವೈಯಕ್ತಿಕ ಸಂದರ್ಶನ (Interview) ದಾಖಲೆ ಪರಿಶೀಲನೆ: ವೈದ್ಯಕೀಯ ಪರೀಕ್ಷೆ ವೇತನ ಎಷ್ಟು?: ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 1,24,000 ರೂ. ನಿಂದ 1,97,000ವರೆಗೆ ವೇತನ ನೀಡಲಾಗುತ್ತದೆ. ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಹುಬ್ಬಳ್ಳಿ ಜನರಿಗೆ ಸುವರ್ಣಾವಕಾಶ: ಪಿಎಂ ವಿಕಾಸ್ ಯೋಜನೆಯಡಿಯಲ್ಲಿ ಶಿಷ್ಯವೇತನ ಜೊತೆಗೆ ಉಚಿತ ತರಬೇತಿ ಕ್ರೀಡಾ ಸಾಧಕರಿಗೆ ಅವಕಾಶ: ಕೇಂದ್ರ ಕ್ರೀಡಾ ಪ್ರಾಧಿಕಾರದದಿಂದ 323 ಹುದ್ದೆ ಭರ್ತಿ