For the first time in 50 years Communist Left With No Government In The Countryಪಿಣರಾಯಿ ವಿಜಯನ್‌, ಜ್ಯೋತಿ ಬಸು

ನವದೆಹಲಿ, ಮೇ 4: ದೇಶದ ರಾಜಯೀಯ ಇತಿಹಾಸದಲ್ಲೇ ಮೇ 04 (ಸೋಮವಾರ) ಮಹತ್ವದ ಬದಲಾವಣೆಯೊಂದು ಸಂಭವಿಸಿದ ದಿನವಾಗಿದೆ. ಪಿಣರಾಯಿ ವಿಜಯನ್‌ ನೇತೃತ್ವದ ಸರ್ಕಾರ ಅಧಿಕಾರ ಕಳೆದುಕೊಂಡರೆ, ಐದು ದಶಕಗಳಲ್ಲಿ ಭಾರತಕ್ಕೆ ಮೊದಲ ಬಾರಿಗೆ ಕಮ್ಯುನಿಸ್ಟ್‌ ಮುಖ್ಯಮಂತ್ರಿ ಇರುವುದಿಲ್ಲ. 1970ರ ಬಳಿಕ ಎಡಪಂಥೀಯರು ಯಾವುದೇ ರಾಜ್ಯದಲ್ಲಿ ಅಧಿಕಾರದಲ್ಲಿಲ್ಲದಿರುವುದು ಇದೇ ಮೊದಲು.  

ಭಾರತದ ರಾಜಯಕೀಯದಲ್ಲಿ ಎಡಪಂಥಿಯ ಉದಯ

ಭಾರತದಲ್ಲಿ ಎಡಪಂಥೀಯ ರಾಜಕೀಯದ ಇತಿಹಾಸ ಬಹಳ ದೊಡ್ಡದಾಗಿದೆ. 1951-52ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ, ಭಾರತದ ಕಮ್ಯುನಿಸ್ಟ್ ಪಕ್ಷ (CPI)ವು ಲೋಕಸಭೆಯಲ್ಲಿ ಅತಿದೊಡ್ಡ ವಿರೋಧ ಪಕ್ಷವಾಗಿ ಹೊರಹೊಮ್ಮಿತು.

ಐದು ವರ್ಷಗಳ ಬಳಿಕ, 1957ರಲ್ಲಿ, ಎಡಪಂಥೀಯರು ಕೇರಳದಲ್ಲಿ ಚುನಾವಣೆಯಲ್ಲಿ ಗೆದ್ದು, ಜಗತ್ತಿನಲ್ಲಿ ಪ್ರಜಾಪ್ರಭುತ್ವದ ಮೂಲಕ ಆಯ್ಕೆಯಾದ ಮೊದಲ ಕಮ್ಯುನಿಸ್ಟ್ ಸರ್ಕಾರವನ್ನು ರಚಿಸಿ ಇತಿಹಾಸ ನಿರ್ಮಿಸಿದರು.

1977ರಲ್ಲಿ, ಸಿಪಿಐ(ಎಂ) ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೆ ಬಂದು, ದೀರ್ಘಕಾಲ ಆಡಳಿತ ನಡೆಸಿದರು. ಜ್ಯೋತಿ ಬಸು ಅವರು 23 ವರ್ಷಗಳಿಗೂ ಹೆಚ್ಚು ಕಾಲ ಮುಖ್ಯಮಂತ್ರಿ ಆಗಿ ಸೇವೆ ಸಲ್ಲಿಸಿದರು. ನಂತರ 2000ರಲ್ಲಿ ಬುದ್ಧದೇವ್ ಭಟ್ಟಾಚಾರ್ಯ ಅವರಿಗೆ ಸ್ಥಾನವನ್ನು ಬಿಟ್ಟುಕೊಟ್ಟರು. ಮತ್ತೆ ಎಡಪಂಥೀಯ ಪಕ್ಷ ಇನ್ನೂ 11 ವರ್ಷಗಳ ಕಾಲ ಬಂಗಾಳದಲ್ಲಿ ಆಡಳಿತ ನಡೆಸಿತು.

ನಂತರ ತ್ರಿಪುರ ಎಡಪಂಥೀಯರು ದೀರ್ಘಕಾಲ ಆಡಳಿತ ನಡೆಸಿದರು. 1993ರಲ್ಲಿ ತ್ರಿಪುರದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸಿಪಿಐ(ಎಂ) 60 ಸ್ಥಾನಗಳಲ್ಲಿ 44 ಸ್ಥಾನಗಳನ್ನು ಗೆದ್ದಿತು. ದಸರಥ್ ದೇವ್ 1998ರವರೆಗೆ ಮುಖ್ಯಮಂತ್ರಿಯಾಗಿದ್ದು, ನಂತರ ಮಾಣಿಕ್ ಸರ್ಕಾರ್ ಅಧಿಕಾರ ವಹಿಸಿಕೊಂಡು 20 ವರ್ಷಗಳ ಕಾಲ ಆಡಳಿತ ನಡೆಸಿದರು.

ಎಡಪಂಥೀಯ ಕುಸಿತ

ಎಡಪಂಥೀಯರ ಕುಸಿತ 2011ರಲ್ಲಿ ಸ್ಪಷ್ಟವಾಗಿ ಆರಂಭವಾಯಿತು. ಸಿಂಗೂರ್ ಮತ್ತು ನಂದಿಗ್ರಾಮದ ಭೂಸ್ವಾಧೀನ ವಿರೋಧ ಪ್ರತಿಭಟನೆಗಳ ಅಲೆಯಲ್ಲಿ, ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಶ್ಚಿಮ ಬಂಗಾಳದಲ್ಲಿ ಭರ್ಜರಿ ಜಯ ಸಾಧಿಸಿತು. 2006ರಲ್ಲಿ 235 ಸ್ಥಾನಗಳನ್ನು ಪಡೆದಿದ್ದ ಎಡಪಂಥೀಯ ಪಕ್ಷ 2011ರಲ್ಲಿ ಕೇವಲ 62 ಸ್ಥಾನಗಳಿಗೆ ಕುಸಿದರು.

ಆ ನಂತರ ತ್ರಿಪುರದಲ್ಲೂ ಹಿನ್ನಡೆ ಅನುಭವಿಸಿತು. 2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೇರಿದ ನಂತರ, 2018ರಲ್ಲಿ ತ್ರಿಪುರದ ಎಡಪಂಥೀಯ ಕೋಟೆಯನ್ನು ಕಮಲ ಪಡೆ ಛಿದ್ರಗೊಳಿಸಿತು. 60 ಸ್ಥಾನಗಳಲ್ಲಿ ಬಿಜೆಪಿ 36 ಸ್ಥಾನಗಳನ್ನು ಗೆದ್ದು ಬೀಗಿತು. ಎಡಪಂಥೀಯ ಪಕ್ಷ 50 ರಿಂದ 16 ಸ್ಥಾನಗಳಿಗೆ ಇಳಿಯಿತು.

ಇದಾದ ನಂತರ ಎಡಪಂಥೀಯರಿಗೆ ಉಳಿದ ಏಕೈಕ ಭರವಸೆ ಕೇರಳವಾಗಿತ್ತು. 2016ರಲ್ಲಿ ಪಿಣರಾಯಿ ವಿಜಯನ್ ಅವರ ನೇತೃತ್ವದಲ್ಲಿ ಮತ್ತೆ ಅಧಿಕಾರಕ್ಕೆ ಬಂದಿತು. ಮತ್ತೆ 2021ರಲ್ಲೂ ಪಿಣರಾಯಿ ವಿಜಯನ್ ಮತ್ತೆ ಅಧಿಕಾರ ವಹಿಸಿಕೊಂಡರು.  

ಆದರೆ ಸೋಮವಾರ ಮಧ್ಯಾಹ್ನದ ಹೊತ್ತಿಗೆ ಕೇರಳದಲ್ಲಿಯೂ ಎಡಪಂಥೀಯರು ಸೋಲು ಕಂಡರು. ಈ ಮೂಲಕ ಕಮ್ಯುನಿಸ್ಟರು ದೇಶದಲ್ಲಿ ಅಧಿಕಾರ ಕಳೆದುಕೊಂಡರು.

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *