2025 April 22 pahalgam attack 1 yearಪಹಲ್ಗಾಮ್‌ ದಾಳಿ

ಶ್ರೀನಗರ, ಏಪ್ರಿಲ್‌ 22: ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ (Pahalgam Attack) ನಡೆದು ಒಂದು ವರ್ಷವಾಯಿತು. ಕಳೆದ ವರ್ಷ 2025ರ ಏಪ್ರಿಲ್‌ 22 ರಂದು ಪಹಲ್ಗಾಮ್‌ನಲ್ಲಿ ಹಿಂದೂಗಳನ್ನೇ ಟಾರ್ಗೆಟ್‌ ಮಾಡಿ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದರು. ಲಷ್ಕರ್-ಎ-ತೈಬಾ ಬೆಂಬಲಿತ ದಿ ರೆಸಿಸ್ಟನ್ಸ್ ಫ್ರಂಟ್ ದಾಳಿ ತಾನೇ ನಡೆಸಿರುವುದಾಗಿ ಒಪ್ಪಿಕೊಂಡಿತು.

ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧಗಳು ತೀವ್ರವಾಗಿ ಹದಗೆಟ್ಟವು. ಇದು ದಶಕಗಳಲ್ಲೇ ಅತ್ಯಂತ ಭೀಕರವಾದ ಸಂಘರ್ಷಕ್ಕೆ ಕಾರಣವಾಯಿತು.

ಈ ದಾಳಿಗೆ ಪಾಕಿಸ್ತಾನ ಬೆಂಬಲ ನೀಡಿದೆ ಎಂದು ಭಾರತ ಆರೋಪಿಸಿತು. ಪಾಕಿಸ್ತಾನ ಈ ಆರೋಪವನ್ನು ತಳ್ಳಿಹಾಕಿತು. ಇದರಿಂದ ಪರಸ್ಪರ ರಾಜತಾಂತ್ರಿಕ ಕ್ರಮಗಳು, ತೀವ್ರ ಸೈನಿಕ ಉದ್ವಿಗ್ನತೆ, ವಾಯು ದಾಳಿಗಳು, ಡ್ರೋನ್ ದಾಳಿಗಳು ಮತ್ತು ಭಾರಿ ಗುಂಡಿನ ದಾಳಿ ನಡೆಯಿತು.

ಮೋದಿಗೆ ಹೋಗಿ ಹೇಳು

ಶಿವಮೊಗ್ಗದ ವಿಜಯನಗರ ನಿವಾಸಿ ಮಂಜುನಾಥ್‌ ಅವರನ್ನು ಭಯೋತ್ಪಾದಕರು ಪತ್ನಿ ಪಲ್ಲವಿ ಮತ್ತು ಪುತ್ರನ ಮುಂಭಾಗದಲ್ಲೇ ಉಗ್ರರು ಗುಂಡಿನ ದಾಳಿ ನಡೆಸಿ ಕೊಂದರು. ಮೂರು ನಾಲ್ಕು ಜನ ದಾಳಿ ಮಾಡಿದ್ದರು. ಆಗ, “ನನ್ನ ಗಂಡನನ್ನು ಕೊಂದಿದೀರಿ, ನನ್ನನ್ನು ಕೊಲ್ಲಿ” ಎಂದು ಪಲ್ಲವಿ ಅವರಿಗೆ ಕೇಳಿಕೊಂಡಿದ್ದರು. ಆಗ ಉಗ್ರನೊಬ್ಬ “ನಾನು ನಿನ್ನ ಕೊಲ್ಲಲ್ಲ. ಮೋದಿಗೆ ಇದನ್ನು ಹೋಗಿ ಹೇಳು” ಅಂತ ಹೇಳಿದ್ದಾನೆ.

ರಿಯಲ್‌ ಎಸ್ಟೇಟ್‌ ಉದ್ಯಮಿಯಾಗಿದ್ದ ಮಂಜುನಾಥ್‌ ಕಾಶ್ಮೀರಕ್ಕೆ ಹೋಗಬೇಕೆಂದು ಕನಸು ಹೊಂದಿದ್ದರು. ಆದರೆ, ಆ ಕನಸೇ ಈಗ ಅವರ ಜೀವವನ್ನು ತೆಗೆದಿತ್ತು.

ಪ್ರತಿಕಾರವಾಗಿ ಆಫರೇಷನ್‌ ಸಿಂದೂರ್‌

ಪೆಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ  2025ರ ಮೇ 7ರಂದು ಭಾರತೀಯ ಸೇನೆ ಪಾಕಿಸ್ತಾನ ಮತ್ತು PoKನಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ವಾಯು ದಾಳಿ ನಡೆಸಿತು. ಈ ಕಾರ್ಯಾಚರಣೆಯಲ್ಲಿ 70 ಉಗ್ರರನ್ನು ಸದೆಬಡೆಯುವಲ್ಲಿ ಭಾರತೀಯ ಸೇನೆ ಯಶಸ್ವಿಯಾಯಿತು.  ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರು ಆಫರೇಷನ್‌ ಸಿಂದೂರ್‌ನ ನೇತೃತ್ವ ವಹಿಸಿದ್ದರು.

ಪಹಲ್ಗಾಮ್‌ ದಾಳಿಯ ಪ್ರಕರಣ ತನಿಖೆಯ ಭಾಗವಾಗಿ ಪೊಲೀಸರು ಸುಮಾರು 1,500 ಮಂದಿಯನ್ನು ವಿಚಾರಣೆಗೆ ಒಳಪಡಿಸಿದ್ದರು. ಭಯೋತ್ಪಾದಕರಿಗೆ ಆಶ್ರಯ ನೀಡಿದ ಆರೋಪದ ಮೇಲೆ ಇಬ್ಬರು ಸ್ಥಳೀಯರನ್ನು ಬಂಧಿಸಲಾಗಿದೆ.

ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಹೇಳುವಂತೆ, “ಈ ಇಬ್ಬರು ವಿಚಾರಣೆ ವೇಳೆ ದಾಳಿಯಲ್ಲಿ ಭಾಗವಹಿಸಿದ್ದ ಮೂವರು ಉಗ್ರರ ಗುರುತನ್ನು ಬಹಿರಂಗಪಡಿಸಿದ್ದಾರೆ.” ಎಂದು ತಿಳಿಸಿದೆ. ಆ ಮೂವರು ಪಾಕಿಸ್ತಾನ ಮೂಲದವರಾಗಿದ್ದು LeT ಸಂಘಟನೆಗೆ ಸೇರಿದವರಾಗಿದ್ದಾರೆ ಎಂದು ತಿಳಿಸಿದೆ.

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *