ಬೆಂಗಳೂರು, ಏಪ್ರಿಲ್ 25: ನಗರದಲ್ಲಿ ಭಾನುವಾರ (ಏ.26) ರಂದು ಬೆಳಗ್ಗೆ 05:00 ಗಂಟೆಯಿಂದ 11:00 ಗಂಟೆಯವರೆಗೆ ಟಿ.ಸಿ.ಎಸ್. ವರ್ಲ್ಡ್ 10ಕ್ಕೆ ಮ್ಯಾರಥಾನ್‌ನ್ನು ಆಯೋಜಿಸಲಾಗಿದೆ. ಈ ಮ್ಯಾರಥಾನ್‌ನಲ್ಲಿ ಸುಮಾರು 30,000 ಜನರು ಭಾಗವಹಿಸಲಿದ್ದಾರೆ. ಈ ಮ್ಯಾರಥಾನ್ RSAOI ಮೈದಾನದಿಂದ ಪ್ರಾರಂಭವಾಗಿ ನಗರದಾದ್ಯಂತ ಸಂಚರಿಸಿ ಕೊನೆಗೆ RSAOI ಮೈದಾನದಲ್ಲೇ ಮುಕ್ತಾಯವಾಗಲಿದೆ. ಈ ಹಿನ್ನೆಲೆಯಲ್ಲಿ ವಿಧಾನಸೌಧಕ್ಕೆ ತೆರಳುವ ಮಾರ್ಗ ಸೇರಿದಂತೆ ಹಲವು ರಸ್ತೆಗಳಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಜೊತೆಗೆ ವಾಹನ ಪಾರ್ಕಿಂಗ್ ಕೂಡ ನಿರ್ಬಂಧಿಸಲಾಗಿದೆ. ಬೆಂಗಳೂರು ಸಂಚಾರಿ ಪೊಲೀಸರು ಬದಲಿ ಮಾರ್ಗವನ್ನು ತಿಳಿಸಿದ್ದಾರೆ. ಮ್ಯಾರಥಾನ್ ಮಾರ್ಗ ಈ ಮ್ಯಾರಥಾನ್ RSAOI ಮೈದಾನದಿಂದ ಪ್ರಾರಂಭವಾಗಿ ಕಬ್ಬನ್ ರಸ್ತೆ, ಬಲತಿರುವು ಪಡೆದು, ಕಾಮರಾಜ್ ರಸ್ತೆ, ಮಣಿಪಾಲ್ ಜಂಕ್ಷನ್, ಎಡತಿರುವು ಪಡೆದು, ಹಲಸೂರು, ಪ್ರಜರ್‌ಟೌನ್ ಮತ್ತು ಶೀವಾಜಿನಗರ ಸಂಚಾರ ಪೊಲೀಸ್ ಠಾಣೆಯ ಸರಹದ್ದಿನ ರಸ್ತೆಗಳಲ್ಲಿ ಸಂಚರಿಸಿಕೊಂಡು ಬಂದು ಕಬ್ಬನ್‌ರಸ್ತೆ, ಬಿ.ಆರ್.ವಿ.ಜಂಕ್ಷನ್, ಸಿ.ಟಿಓ ಜಂಕ್ಷನ ರಾಜಭವನ ರಸ್ತೆ, ಪೊಲೀಸ್ ತಿಮ್ಮಯ್ಯ ಜಂಕ್ಷನ್ ಎಡತಿರುವು ಪಡೆಯುತ್ತದೆ. ಮುಂದೆ, ಅಂಬೇಡ್ಕರ್ ರಸ್ತೆ, ಗೋಪಾಲ ಗೌಡ ಜಂಕ್ಷನ್ ಯು ಟರ್ನ್ ಮತ್ತೆ ಅಂಬೇಡ್ಕರ್ ರಸ್ತೆ, ಪೊಲೀಸ್ ತಿಮ್ಮಯ್ಯ ಜಂಕ್ಷನ್, ಮೆನ್‌ಸ್ಟರ್ ಜಂಕ್ಷನ್ (ಸಿ.ಟಿ.ಓ) ಬಲತಿರುವು ಕ್ಲೀನ್ಸರಸ್ತೆ, ಕ್ಲೀನ್ಸ್ ಜಂಕ್ಷನ್ ಯುಟರ್ನ್, ಕ್ಲೀನ್ಸರಸ್ತೆ ಸಿ.ಟಿ ಓಜಂಕ್ಷನ್, ಬಲತಿರುವು, ಕಬ್ಬನ್ ರಸ್ತೆ, ಬಿ.ಆರ್.ವಿ ಜಂಕ್ಷನ್, ಕಾಮರಾಜ್ ರಸ್ತೆ RSAOI ಗೌಂಡ್‌ನಲ್ಲಿ ಬಂದು ಮುಕ್ತಾಯವಾಗುತ್ತದೆ. ಸಂಚಾರ ನಿರ್ಬಂಧ: (ಬೆಳಗ್ಗೆ 05:00 ಗಂಟೆಯಿಂದ 11:00 ಗಂಟೆಯವರೆಗೆ) • ವಿಧಾನಸೌಧ ಕಡೆಗೆ ಯಾವುದೇ ವಾಹನಗಳ ಪ್ರವೇಶಕ್ಕೆ ಅವಕಾಶವಿರುವುದಿಲ್ಲ.• ಕಬ್ಬನ್ ರಸ್ತೆ, ಸಿ.ಟಿ.ಓ ಜಂಕ್ಷನ್‌ನಿಂದ ಮಣಿಪಾಲ್ ಸೆಂಟರ್ ಮತ್ತು ಮಣಿಪಾಲ್ ಸೆಂಟರ್‌ನಿಂದ ಸಿ.ಟಿ.ಓ ಜಂಕ್ಷನ್‌ವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿರುತ್ತದೆ.• ಸೆಂಟ್ ಜಾನ್ಸ್ ರಸ್ತೆ (ಡಿಕನ್‌ಸನ್ ರಸ್ತೆಯಿಂದ ವೀರಪಳ್ಳಿ ಸ್ಟ್ರೀಟ್ವರೆಗೆ) ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿರುತ್ತದೆ.• ಕಾಮರಾಜ ರಸ್ತೆ (ಕಬ್ಬನ್ ರಸ್ತೆಯಿಂದ ಡಿಕನ್‌ಸನ್ ಜಂಕ್ಷನ್‌ವರೆಗೆ) ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿರುತ್ತದೆ.• ಡಿಕನ್‌ಸನ್ ರಸ್ತೆ, ದೋಭಿ ಫಾಟ್ ಜಂಕ್ಷನ್ ನಿಂದ ಡಿಕನ್‌ಸನ್ ಜಂಕ್ಷನ್‌ವರೆಗೆ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿರುತ್ತದೆ.• ಗಂಗಾಧರ ಚೆಟ್ಟಿ ರಸ್ತೆ, ನಾಗಮ್ಮ ದೇವಸ್ಥಾನದಿಂದ ತಿರುವಳ್ಳುರ್ ಪ್ರತಿಮೆವರೆಗೆ ಎರಡು ಬದಿಯ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿರುತ್ತದೆ.• ಯುನಿಯನ್ ಸ್ಟ್ರೀಟ್ ರಸ್ತೆ, ಇನ್‌ಫೆಂಟ್ರಿ ರಸ್ತೆಯಿಂದ ಕಬ್ಬನ್ ರಸ್ತೆಯವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿರುತ್ತದೆ.• ಲೇಡಿ ಕರ್ಜನ್ ರಸ್ತೆ, ಇನ್ಪೇಂಟ್ರಿ ರಸ್ತೆಯಿಂದ ಕಬ್ಬನ್ ರಸ್ತೆಯವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿರುತ್ತದೆ.• ಭಾಸ್ಕರನ್ ರಸ್ತೆ ಕಾಮಧೇನು ಜಂಕ್ಷನ್ ನಿಂದ ಗುರುದ್ವಾರ ಜಂಕ್ಷನ್ ಕೆನ್ಸಿಂಗ್ಟನ್ ಜಂಕ್ಷನ್ ವರೆಗೆ ಎರಡು ಬದಿಯ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿರುತ್ತದೆ.• ಹಲಸೂರು ರಸ್ತೆ ಮತ್ತು ಡಿಕನ್‌ಸನ್ ರಸ್ತೆ ಜಂಕ್ಷನ್ ನಿಂದ ಬೇಗಂ ಮಹಲ್ ಜಂಕ್ಷನ್ ವರೆಗೆ ಎರಡು ಬದಿಯ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿರುತ್ತದೆ.• ಗಂಗಾಧರ ಚೆಟ್ಟೆ ರಸ್ತೆ ಗುರುದ್ವಾರ ಜಂಕ್ಷನ್ ನಿಂದ ದೋಭಿ ಘಾಟ್ ಜಂಕ್ಷನ್ ವರೆಗೆ ಎರಡು ಬದಿಯ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿರುತ್ತದೆ.• ಶ್ರೀ ಸರ್ಕಲ್ ಜಂಕ್ಷನ್‌ನಿಂದ ಆರ್.ಬಿ.ಐ ಜಂಕ್ಷನ್ ಕಡೆಗೆ ಅಜಂತಾ ರಸ್ತೆ ಮೂಲಕ ಹೋಗುವ ಎಲ್ಲಾ ರೀತಿಯ ವಾಹನಗಳ ಸಂಚಾರನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿರುತ್ತದೆ.• ನಾಗಾ ಜಂಕ್ಷನ್‌ನಿಂದ ಶ್ರೀ ಸರ್ಕಲ್ ಕಡೆಗೆ ಸೆಂಟ್ ಜಾನ್ಸ್ ರಸ್ತೆ ಮೂಲಕ ಹೋಗುವ ಎಲ್ಲಾ ರೀತಿಯ ವಾಹನಗಳ ಸಂಚಾರನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿರುತ್ತದೆ.• ಹಜ್ ಕ್ಯಾಂಪ್‌ನಿಂದ ಥಾಮಸ್ ಕೆಫೆ ಜಂಕ್ಷನ್ ಮೂಲಕ ವಾರ್ ಮೆಮೋರಿಯಲ್ ಜಂಕ್ಷನ್ ಕಡೆಗೆ ಸೇಂಟ್ ಜಾನ್ಸ್ ಚರ್ಚ್ ಮೂಲಕ ಹೋಗುವ ಎಲ್ಲಾ ರೀತಿಯ ವಾಹನಗಳ ಸಂಚಾರನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿರುತ್ತದೆ.• ಸಿಂಧಿ ಕಾಲೋನಿ ಜಂಕ್ಷನ್‌ನಿಂದ ವಾರ್ ಮೆಮೋರಿಯಲ್ ಜಂಕ್ಷನ್ ಕಡೆಗೆ ಅಸಯ್ಕೆ ರಸ್ತೆ ಮೂಲಕ ಹೋಗುವ ಎಲ್ಲಾ ರೀತಿಯ ವಾಹನಗಳ ಸಂಚಾರನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿರುತ್ತದೆ.• ಕಾಕ್ಸ್ ಟೌನ್‌ನಿಂದ ಸುಂದರಮೂರ್ತಿ ರಸ್ತೆ ಮೂಲಕ ವಾರ್ ಮೆಮೋರಿಯಲ್ ಜಂಕ್ಷನ್ ಕಡೆಗೆ ಹೋಗುವ ಎಲ್ಲಾ ರೀತಿಯ ವಾಹನಗಳ ಸಂಚಾರನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿರುತ್ತದೆ. ಪರ್ಯಾಯ ಮಾರ್ಗ • ಕ್ಲೀನ್ಸ್ ರಸ್ತೆಯಿಂದ ವಿಧಾನ ಸೌಧ ಕಡೆಗೆ ಸಂಚರಿಸುವ ವಾಹನಗಳನ್ನು ಬಾಳೆಕುಂದ್ರಿ ಜಂಕ್ಷನ್ ಬಳಿ ಕನ್ನಿಂಗ್ ಹ್ಯಾಂ ರಸ್ತೆಯ ಮೂಲಕ ಚಂದ್ರಿ ಜಂಕ್ಷನ್ ಬಳಿ ಎಡತಿರುವು ಪಡೆದು ಚಾಲುಕ್ಯ ಜಂಕ್ಷನ್ ಪ್ಯಾಲೆಸ್ ರಸ್ತೆಯ ಮೂಲಕ ಕೆಂಪೇಗೌಡ ಬಸ್ ನಿಲ್ದಾಣ. ಸಿಟಿ ಮಾರ್ಕೆಟ್ ಬಸ್ ನಿಲ್ದಾಣ ಕಡೆಗೆ ಸಂಚರಿಸುವುದು.• ಕೆಂಪೇಗೌಡ ಬಸ್ ನಿಲ್ದಾಣ, ಸಿಟಿ ಮಾರ್ಕೆಟ್ ಬಸ್ ನಿಲ್ದಾಣ ಕಡೆಯಿಂದ ಬರುವ ವಾಹನಗಳ ಮಾರ್ಗ ಬದಲಾಯಿಸಿ ಪೊಲೀಸ್ ಕಾರ್ನರ್ ಕಡೆಗೆ ಮತ್ತು ಪ್ಯಾಲೆಸ್ ರಸ್ತೆಯ ಕಡೆಗೆ ಚಲಿಸಲು ಅವಕಾಶ ನೀಡಲಾಗಿದೆ.• ಇನ್‌ಫೆಂಟ್ರಿ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಬಾಳೆಕುಂದ್ರಿ ಜಂಕ್ಷನ್ ಕಡೆಗೆ ಸಂಚರಿಸುವುದು.• ಬಾಳೇಕುಂದ್ರಿ ವೃತ್ತದಿಂದ ವಿಧಾನಸೌದ ಕಡೆಗೆ ಬರುವ ವಾಹನಗಳನ್ನು ಪಟ್ಟಿ ಜಂಕ್ಷನ್‌ನಲ್ಲಿ ಮಾರ್ಗ ಬದಲಾಯಿಸಿ ರಾಜಭವನ ಹಾಗೂ ಚಾಲುಕ್ಯವೃತ್ತಕಡೆಗೆ ಚಲಿಸಲು ಅವಕಾಶ ಕಲ್ಪಿಸಲಾಗಿದೆ.• ಕ್ಲೀನ್ಸ್ ಜಂಕ್ಷನ್ ಕಡೆಯಿಂದ ಮಣಿಪಾಲ್ ಜಂಕ್ಷನ್ ಕಡೆಗೆ ಸಂಚರಿಸುವ ವಾಹನ ಸವಾರರು (ಧಾರಿ ಗೂಡ್ಸ್ ವಾಹನಗಳನ್ನು ಹೊರತುಪಡಿಸಿ) ಟ್ರಾಫಿಕ್ ಹೆಡ್ ಕ್ವಾಟರ್ ಜಂಕ್ಷನ್ ಬಳಿ ಎಡ ತಿರುವು ಪಡೆದು ಇನ್‌ಫೆಂಟ್ರಿ ರಸ್ತೆ ಸೆಂಟ್ರಲ್ ಸ್ಪೀಟ್ ಜಂಕ್ಷನ್ ಮೂಲಕ ಸ ಫಿನಾ ಪ್ಲಾಜಾ ತಲುಪಿ ತಿರುವು ಪಡೆದು ಮೈನ್ ಗಾರ್ಡ್ ಕ್ರಾಸ್ ರಸ್ತೆ ಬಳಿ ಬಲ ತಿರುವು ಪಡೆದು ಡಿಸೆನ್ಸರಿ ರಸ್ತೆ ಮೂಲಕ ಡಿಕನ್‌ಸನ್ ಜಂಕ್ಷನ್ ತಲುಪಿ ಎಡತಿರುವು ಪಡೆದು ಕಾಮರಾಜ ರಸ್ತೆ ಮೂಲಕ ಹೋಗಿ ವಿಠೋಭಾ ದೇವಸ್ಥಾನದ ಹತ್ತಿರ ಬಲ ತಿರುವು ಪಡೆದು ನಂತರ ನಾಗಮ್ಮ ದೇವಸ್ಥಾನದ ಹತ್ತಿರ ಎಡ ತಿರವು ಪಡೆದು ಸೆಂಟ್ ಜಾನ್ ರಸ್ತೆಯ ಮೂಲಕ ಮುಂದೆ ಸಂಚರಿಸಬಹುದಾಗಿದೆ.• ಕ್ಲೀನ್ಸ್ ರಸ್ತೆ ಮೂಲಕ ಶಿವಾಜನಗರ ಕಡೆಗೆ ಬರುವ ವಾಹನಗಳು ಟ್ರಾಫಿಕ್ ಹೆಡ್ ಕ್ವಾಟರ್ ಜಂಕ್ಷನ್ ಬಳಿ ಎಡ ತಿರುವು ಪಡೆದು ಇನ್‌ಫೆಂಟ್ರಿ ರಸ್ತೆ ಸೆಂಟ್ರಲ್ ಸ್ಟ್ರೀಟ್ ಜಂಕ್ಷನ್ ಮೂಲಕ ಶಿವಾಜಿನಗರ ತಲುಪಬಹುದಾಗಿದೆ.• ಶಿವಾಜಿನಗರ ಬಸ್ ನಿಲ್ದಾಣದಿಂದ ಮೆಜೆಸ್ಟಿಕ್, ಕೆ.ಆರ್. ಮಾರುಕಟ್ಟೆ ಕಡೆಗೆ ಹೋಗುವ ಎಲ್ಲಾ ಬಿಎಂಟಿಸಿ ಬಸ್‌ಗಳು ಕಡ್ಡಾಯವಾಗಿ ವೆಂಕಟಸ್ವಾಮಿ ನಾಯ್ಡು ರಸ್ತೆಯಲ್ಲಿ ಬಾಳೆಕುಂದ್ರಿ ಜಂಕ್ಷನ್ ತಲುಪಿ ಕನ್ನಿಂಗ್ ಹ್ಯಾಮ್ ರಸ್ತೆಯ ಮೂಲಕ ಮುಂದೆ ಸಂಚರಿಸಬಹುದಾಗಿದೆ.• ಎಂಜಿ ರಸ್ತೆ ಕಡೆಯಿಂದ ಹಲಸೂರು ರಸ್ತೆ ಕಡೆಗೆ ಸಂಚರಿಸುವ ವಾಹನ ಸವಾರು ವೆಬ್ ಜಂಕ್ಷನ್ ಟ್ರಿನಿಟಿ ಜಂಕ್ಷನ್ ಮೂಲಕ ಪಾಡು ಸ್ವಾಮಿ ವಿವೇಕಾನಂದ ರಸ್ತೆ ಕಡೆಗೆ ಸಂಚರಿಸಿ ರಾಮಯ್ಯ ಜಂಕ್ಷನ್ ತಲುಪಿ- ಆದರ್ಶ ಜಂಕ್ಷನ್ ಮೂಲಕ ಹಳೇ ಮದ್ರಾಸ್ ರಸ್ತೆ ಕಡೆಗೆ ಸಂಚರಿಸಬಹುದಾಗಿದೆ.• ಹಳೇ ಮದ್ರಾಸ್ ರಸ್ತೆ ಮೂಲಕ ಗಂಗಾಧರ ಚೆಟ್ಟಿ ರಸ್ತೆ ಮತ್ತು ಭಾಸ್ಕರನ್ ರಸ್ತೆಯ ಕಡೆಗೆ ಸಂಚರಿಸುವ ವಾಹನ ಸವಾರರು ಆಂಜನೇಯ ಜಂಕ್ಷನ್ ಬಳಿ ಎಡ ತಿರುವು ಪಡೆದು ಸ್ವಾಮಿ ವಿವೇಕಾನಂದ ರಸ್ತೆ ಮೂಲಕ ಹಾದು ಆದರ್ಶ ಜಂಕ್ಷನ್- ರಾಮಯ್ಯ ಜಂಕ್ಷನ್- ಟ್ರಿನಿಟಿ ಜಂಕ್ಷನ್ ಮೂಲಕ ಮುಂದೆ ಸಂಚರಿಸಬಹುದಾಗಿದೆ.• ಶ್ರೀ ಸರ್ಕಲ್ ಜಂಕ್ಷನ್‌ನಿಂದ ಆರ್.ಬಿ.ಐ ಜಂಕ್ಷನ್ ಕಡೆಗೆ ಸಂಚರಿಸುವ ಎಲ್ಲಾ ವಾಹನಗಳ ಚಾಲಕರು/ಸವಾರರು ಸೇಂಟ್ ಜಾನ್ಸ್ ರಸ್ತೆ ಮೂಲಕ ನೇರವಾಗಿ ಚಲಿಸಿ ಪ್ರಾಮಿನೆಂಡ್ ರಸ್ತೆಯ ಬೇಕರಿ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ವೀಲರ್ಸ್ ಮತ್ತು ಐಓಸಿ ಫೈ ಓವರ್ ಮೂಲಕ ಸಂಚರಿಸಬಹುದಾಗಿರುತ್ತದೆ. ರಸ್ತೆಯ ಸಿಂಧಿ ಕಾಲೋನಿ ಜಂಕ್ಷನ್ ಐಟಿಸಿ ಪ್ರೈ ಓವರ್ ಸಂಚರಿಸಿ ಇಂದಿರಾನಗರ ಮತ್ತು ಹಲಸೂರು ಕಡೆಗೆ• ನಾಗಾ ಜಂಕ್ಷನ್‌ನಿಂದ ಶ್ರೀ ಸರ್ಕಲ್ ಮೂಲಕ ಶಿವಾಜಿನಗರ ಕಡೆಗೆ ಸಂಚರಿಸುವ ಎಲ್ಲಾ ವಾಹನಗಳ ಚಾಲಕರು/ಸವಾರರು ಸೇಂಟ್ ಜಾನ್ಸ್ ಚರ್ಚ ಮೂಲಕ ಹೇನ್ಸ್ ಜಂಕ್ಷನ್ ಸರ್ವೀಸ್ ರಸ್ತೆ ಮೂಲಕ ಶಿವಾಜಿನಗರ ಕಡೆಗೆ ಸಂಚರಿಸಬಹುದಾಗಿರುತ್ತದೆ.• ಹಜ್ ಕ್ಯಾಂಪ್‌ನಿಂದ ಥಾಮಸ್ ಕೆಫೆ ಜಂಕ್ಷನ್ ಮೂಲಕ ವಾರ್ ಮೆಮೋರಿಯಲ್ ಜಂಕ್ಷನ್ ಕಡೆಗೆ ಸಂಚರಿಸುವ ಎಲ್ಲಾ ವಾಹನಗಳ ಚಾಲಕರು/ಸವಾರರು ಕೆಫೆ ಜಂಕ್ಷನ್‌ದಲ್ಲಿ ಎಡ ತಿರುವು ಪಡೆದು ವೀಲರ್ ರಸ್ತೆಯ ಸಿಂಧಿ ಕಾಲೋನಿ ಜಂಕ್ಷನ್ ಐಟಿಸಿ ಫೈ ಓವರ್ ಮತ್ತು ಐಹಿಸಿ ಫೈ ಓವರ್ ಮೂಲಕ ಇಂದಿರಾನಗರ ಮತ್ತು ಹಲಸೂರು ಕಡೆಗೆ ಸಂಚರಿಸಬಹುದಾಗಿರುತ್ತದೆ.• ಸಿಂಧಿ ಕಾಲೋನಿ ಜಂಕ್ಷನ್‌ದಿಂದ ಮೆಮೋರಿಯಲ್ ಜಂಕ್ಷನ್ ಕಡೆಗೆ ಸಂಚರಿಸುವ ಎಲ್ಲಾ ವಾಹನಗಳ ಚಾಲಕರು/ಸವಾರರು ಅಸಯ್ಕೆ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಸುಂದರಮೂರ್ತಿ ರಸ್ತೆ ಮೂಲಕ ಚಾರ್ಲ್ಸ್ ಕ್ಯಾಂಬೆಲ್ ರಸ್ತೆ ಕಲ್ಪಳ್ಳಿ ಸ್ಮಶಾನ ರಸ್ತೆಯ ಮೂಲಕ ಇಂದಿರಾನಗರ ಮತ್ತು ಹಲಸೂರು ಕಡೆಗೆ ಸಂಚರಿಸಬಹುದಾಗಿರುತ್ತದೆ.• ಕಾಕ್ಸ್ ಟೌನ್‌ನಿಂದ ಸುಂದರಮೂರ್ತಿ ರಸ್ತೆ ಮೂಲಕ ವಾರ್ ಮೆಮೋರಿಯಲ್ ಜಂಕ್ಷನ್ ಕಡೆಗೆ ಸಂಚರಿಸುವ ಎಲ್ಲಾ ವಾಹನಗಳ ಚಾಲಕರು/ಸವಾರರು ಆಸಯ್ಯ ಜಂಕ್ಷನ್ದಲ್ಲಿ ಬಲ ತಿರುವು ಪಡೆದು ಸಿಂಧಿ ಕಾಲೋನಿ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ವೀಲರ್ ರಸ್ತೆಯಲ್ಲಿ ಬಲ ತಿರುವು ಪಡೆದು ಕೋಲ್ಡ್ ರಸ್ತೆ ಮೂಲಕ ಸಂಚರಿಸಿ ಕೋಲ್ಸ್ ರಸ್ತೆಯಲ್ಲಿ ಎಡ ತಿರುವು ಪಡೆದು ಹೇನ್ಸ್ ರಸ್ತೆ ಮೂಲಕ ಶಿವಾಜಿನಗರ ಕಡೆಗೆ ಸಂಚರಿಸಬಹುದಾಗಿರುತ್ತದೆ. ವಾಹನ ನಿಲುಗಡೆ ನಿರ್ಬಂಧಿತ ಸ್ಥಳಗಳು ಬಿ.ಆರ್ ಅಂಬೇಡ್ಕರ್ ರಸ್ತೆ ರಾಜಭವನ ರಸ್ತೆ ಕ್ವೀನ್ಸ್ ರಸ್ತೆ ಕಬ್ಬನ್ ಪಾರ್ಕ್ ಸುತ್ತ-ಮುತ್ತ ಕಬ್ಬನ್ ರಸ್ತೆ ಇನ್‌ಫೆಂಟ್ರಿ ರಸ್ತೆ ಅಲಿ ಅಸ್ಕರ್ ರಸ್ತೆ ಸ್ಯಾಂಕಿ ರಸ್ತೆ ಎ.ಜಿ ಕಚೇರಿಯಿಂದ ಚಾಲುಕ್ತ ಜಂಕ್ಷನ್‌ವರೆಗೆ ಮ್ಯುಸಿಯಂ ರಸ್ತೆ ಕಸ್ತೂರ ಬಾ ರಸ್ತೆ ಸೆಂಟ್ ಮಾರ್ಕ್ಸ್ ರಸ್ತೆ ವಾರ್ ಮೆಮೋರಿಯಲ್ ಜಂಕ್ಷನ್ ಅಣ್ಣಸ್ವಾಮಿ ಮುದಲಿಯಾರ್ ರಸ್ತೆ ಸೆಂಟ್ ಜಾನ್ಸ್ ರಸ್ತೆ ಸೆಂಟ್ ಜಾನ್ಸ್ ಚರ್ಚ ರಸ್ತೆ ಅಸ್ಸಯೇ ರಸ್ತೆ ಅಸ್ಸಯೇ ರಸ್ತೆ ವೀಲ್ಹರ್ಸ್ ರಸ್ತೆ ಅಂಜನಾ ರಸ್ತೆ ಹಾಗೂ ಕಾಮರಾಜ ರಸ್ತೆ ವಾಹನ ನಿಲುಗಡೆಗೆ ಅವಕಾಶ ಸ್ಥಳ ಎಂ.ಎಸ್. ಬಿಲ್ಡಿಂಗ್ ಪಾರ್ಕಿಂಗ್ ಪ್ರದೇಶಗಳು ಎ.ಜಿ. ಕಚೇರಿಯಿಂದ ಎಸ್.ಎಸ್. ಬಿಲ್ಡಿಂಗ್‌ವರೆಗೆ ಎಂ. ಎಲ್.ಸಿ.ಪಿ ಪಾರ್ಕಿಂಗ್, ಪ್ರೀಡಂಪಾರ್ಕ್ ಹತ್ತಿರ ಜ್ಞಾನ ಜ್ಯೋತಿ ಸಭಾಂಗಣ ಆವರಣ ಶಾಸಕರ ಭವನದ ಪಾರ್ಕಿಂಗ್ ಆವರಣ ನೆಹರು ಪ್ಲಾನೀಟೋರಿಯಂ ಒಳಗಾಂಣ ಸ್ಕೌಟ್ ಅಂಡ್ ಗೈಡ್ ಮೈದಾನ, ಅರಮನೆ ರಸ್ತೆ ಶಿವಾಜಿನಗರ ಬಸ್‌ನಿಲ್ದಾಣದ ಪಾರ್ಕಿಂಗ್ ಸ್ಥಳ ಯುಬಿಸಿಟಿ ಶೋಭಾ ಮಾಲ್ ಚರ್ಚ್ ಸ್ಟ್ರೀಟ್ ಯು.ಬಿ ಸಿ.ಟಿ ಒನ್ ಎಂ.ಜಿ ಲಿಡೋ ಮಾಲ್ ಗರುಡಾ ಮಾಲ್ ಸ್ವಾಗತ್ ಚಿತ್ರಮಂದಿರ ಹಾಗೂ ಮಣಿಪಾಲ್ ಸೆಂಟರ್ ಪಿಕಪ್ ಮತ್ತು ಡ್ರಾಪ್ ಸ್ಥಳಗಳು ಸಿ.ಟಿ.ಸಿ ಜಂಕ್ಷನ್ ಅನಿಲ್ ಕುಂಬ್ಳೆ ಜಂಕ್ಷನ್ ಸಿದ್ದಲಿಂಗಯ್ಯ ಜಂಕ್ಷನ್ ಕಾವೇರಿ ಎಂಪೋರಿಯಂ ಜಂಕ್ಷನ್ ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಉತ್ತರ ಕರ್ನಾಟಕದ ಈ ಜಿಲ್ಲೆಗಳಲ್ಲಿ ಏ.25 ರಂದು ಆಲಿಕಲ್ಲು ಮಳೆ: ರೈತರಿಗೆ ಸಂಕಷ್ಟ ರಾಜ್ಯಾದ್ಯಂತ ಏಪ್ರಿಲ್ 30ರವರೆಗೆ ಆಲಿಕಲ್ಲು ಮಳೆ: ಹವಾಮಾನ ಇಲಾಖೆ